More

    ‘ರೆಸ್ಟೋರೆಂಟ್​ನಲ್ಲಿ ಡಿನ್ನರ್​, ಬೀದಿ ಬದಿ ಮಕ್ಕಳೊಂದಿಗೆ ರಿಲ್ಯಾಕ್ಸ್’​….ನಟಿ ದೀಪಿಕಾ ಪಡುಕೋಣೆ ‘ಬದುಕಿನ ಸಂತೋಷ’

    ಮುಂಬೈ: ದೆಹಲಿಯ ಜೆಎನ್​ಯುದಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಅಲ್ಲಿಗೆ ಭೇಟಿ ಕೊಟ್ಟು ಗಾಯಗೊಂಡ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಮತ್ತಿತರರೊಂದಿಗೆ 15 ನಿಮಿಷ ಕಾಲಕಳೆದಿದ್ದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದಾರೆ.

    ಒಂದಷ್ಟು ಜನ ದೀಪಿಕಾ ಪಡುಕೋಣೆಯ ಕಾರ್ಯವನ್ನು ಶ್ಲಾಘಿಸುತ್ತಿದ್ದರೆ ಮತ್ತೊಂದಷ್ಟು ಮಂದಿ ಅವರನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅವರ ಮುಂದಿನ ಚಿತ್ರ ಚಪಾಕ್​ನ್ನು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ನ್ನೇ ಸೃಷ್ಟಿಸಲಾಗಿತ್ತು.

    ಆದರೆ ದೀಪಿಕಾ ಪಡುಕೋಣೆ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ತಮ್ಮ ವಿರುದ್ಧ ಟೀಕಾಪ್ರಹಾರಗಳೇ ಬೀಳುತ್ತಿದ್ದರೂ ದೀಪಿಕಾ ತುಂಬ ರಿಲ್ಯಾಕ್ಸ್​ ಮೂಡನಲ್ಲಿಯೇ ಇದ್ದಾರೆ ಎಂಬುದಕ್ಕೆ ಅವರ ಇನ್ಸ್ಟಾಗ್ರಾಂ ಸ್ಟೋರಿಯ ಫೋಟೋಗಳೇ ಸಾಕ್ಷಿ.

    ದೀಪಿಕಾ ಪಡುಕೋಣೆ ಮುಂಬೈನಲ್ಲಿ ಬೀದಿ ಬದಿಯಲ್ಲಿ ವಾಸಿಸುವ ಮಕ್ಕಳನ್ನು ತಬ್ಬಿಕೊಂಡು, ಅವರೊಂದಿಗೆ ಕಾಲಕಳೆದಿದ್ದಾರೆ. ಇದು ಅಲ್ಲಿನ ಕೆಲವು ಫೋಟೋಗ್ರಾಫರ್​ಗಳ ಕ್ಯಾಮರಾದಲ್ಲಿ ಕೂಡ ಸೆರೆಯಾಗಿದೆ. ಆ ಛಾಯಾಚಿತ್ರಕಾರರು ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ರೆಸ್ಟೋರೆಂಟ್​ವೊಂದರಲ್ಲಿ ರಾತ್ರಿ ಊಟ ಮುಗಿಸಿ ಹೊರಗೆ ಬರುತ್ತಾರೆ. ಅಲ್ಲಿಯೇ ಇದ್ದ ಕೆಲವು ಬೀದಿ ಮಕ್ಕಳನ್ನು ತಬ್ಬಿಕೊಂಡು ಅವರೊಂದಿಗೆ ಕಾಲಕಳೆಯುತ್ತಾರೆ. ಆ ಹೊತ್ತಲ್ಲಿ ಅಲ್ಲಿ ರೆಸ್ಟೋರೆಂಟ್​ಗೆಂದು ಬಂದಿದ್ದವರೂ ದೀಪಿಕಾ ಪಡುಕೋಣೆ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುವುದನ್ನು ವಿಡಿಯೋ, ಫೋಟೋಗಳಲ್ಲಿ ನೋಡಬಹುದು.

    ತಾವು ಮಕ್ಕಳೊಂದಿಗೆ ಇದ್ದ ಫೋಟೋಗಳನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡ ನಟಿ, ಬದುಕಿನ ಸಂತೋಷ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಅವರ ಫೋಟೋಗಳು ಸಖತ್​ ವೈರಲ್ ಆಗುತ್ತಿವೆ.

    ಜೆಎನ್​ಯುಗೆ ಭೇಟಿ ನೀಡಿ ವಿವಾದವನ್ನು ಮೈಗೆಳೆದುಕೊಂಡಿದ್ದ ನಟಿ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್​ ಜನವರಿ 10ರಂದು ಬಿಡುಗಡೆಯಾಗಿದೆ. ಮರುದಿನ ಅಂದರೆ ಜನವರಿ 11ರಂದು 6.90 ಕೋಟಿ ರೂ.ಗಳಿಕೆ ಮಾಡಿದ್ದು ಒಟ್ಟು ಎರಡು ದಿನಗಳಲ್ಲಿ ಚಿತ್ರದ ಗಳಿಕೆ 11.67 ಕೋಟಿ ರೂಪಾಯಿ ಎನ್ನಲಾಗಿದೆ. ಅಲ್ಲದೆ ವಿಮರ್ಶಕರೂ ಕೂಡ ಸಿನಿಮಾವನ್ನು ಸಿಕ್ಕಾಪಟೆ ಹೊಗಳುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts