VIDEO: ಬ್ಯಾಟ್​ನಲ್ಲಿ ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ… ಇದು ರಿಯಲ್ಲೂ ಹೌದು, ರೀಲೂ ಹೌದು… ಎಂದ ನಟ!

ನವದೆಹಲಿ: ಬ್ಯಾಟ್​ನಲ್ಲಿ ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ… ಇದು ರಿಯಲ್ಲೂ ಹೌದು, ರೀಲೂ ಹೌದು… ಬಾಲಿವುಡ್​ನ ಖ್ಯಾತ ನಟರೊಬ್ಬರು ಟ್ವೀಟ್​ ಮಾಡಿದ್ದಾರೆ! ಅಯ್ಯೋ ಪಾಪ! ಆತನ ಹೆಂಡತಿಗೆ ಏನಾದರೂ ಹುಚ್ಚೇ…? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವ ಮುನ್ನವೇ ಇಲ್ಲಿ ಸ್ಪಷ್ಟನೆ ಕೊಟ್ಟುಬಿಡುತ್ತೇವೆ… ಓದಿಕೊಳ್ಳಿ.

ಮೇಲಿನ ಹೇಳಿಕೆ ನೀಡಿ ಪತ್ನಿಯ ವಿರುದ್ಧ ದೂರಿಕೊಂಡಿದ್ದ ಬಾಲಿವುಡ್​ ನಟ ರಣವೀರ್​ ಸಿಂಗ್​. ಇವರ ಹೆಸರು ಹೇಳಿದ ಮೇಲೆ ಇವರ ಪತ್ನಿಯ ಹೆಸರು ಹೇಳುವ ಅವಶ್ಯಕತೆ ಇಲ್ಲವಾದರೂ, ಹೇಳುವಂತರಾಗುತ್ತೇವೆ… ಓದಿ… ಇವರನ್ನು ಬ್ಯಾಟ್​ನಿಂದ ಹೊಡೆದವರು ದೀಪಿಕಾ ಪಡುಕೋಣೆ…

ಒಹೋ! ರಣವೀರ್​ ಸಿಂಗ್​ ಎಲ್ಲಾದರೂ ದಾರಿ ತಪ್ಪುತ್ತಿದ್ದರೋ ಏನೋ… ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಇಲ್ಲ ಸ್ವಾಮಿ. ದೀಪಿಕಾ ಪಡುಕೋಣೆ ಅವರ ಹದ್ದಿನ ಕಣ್ಣಿನ ಕಾವಲಿರುವಾಗ ರಣವೀರ್​ ಸಿಂಗ್​ ದಾರಿ ತಪ್ಪಲು ಸಾಧ್ಯವೇ? ಊಹೂಂ… ಖಂಡಿತಾ ಇಲ್ಲ.

ಹಾಗಾದರೆ, ರಣವೀರ್​ಗೆ ದೀಪಿಕಾ ಬ್ಯಾಟ್​ನಲ್ಲಿ ಹೊಡೆದದ್ದು ಏಕೆ? ಆಯ್ತು. ನಿಮ್ಮ ತಾಳ್ಮೆಯನ್ನು ಹೆಚ್ಚು ಪರೀಕ್ಷಿಸದೆ ಈ ಪ್ರಶ್ನೆಗೆ ಉತ್ತರ ಹೇಳುತ್ತೇವೆ ಕೇಳಿ. ರಣವೀರ್​ ಸಿಂಗ್​ ಅವರು 83 ಎಂಬ ಬಾಲಿವುಡ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ಸ್ವಾಮಿ, ಭಾರತ ಮೊದಲ ಬಾರಿಗೆ 1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದುಕೊಂಡಿತ್ತಲ್ಲಾ… ಆ ವಿಷಯ ಆಧಾರಿತ ಚಿತ್ರವದು. ಆ ಚಿತ್ರದಲ್ಲಿ ರಣವೀರ್​ ಅವರು ಕಪಿಲ್​ದೇವ್​ ಅವರ ಪಾತ್ರ ನಿರ್ವಹಿಸುತ್ತಿದ್ದರೆ, ದೀಪಿಕಾ ಅವರು ಕಪಿಲ್​ ಪತ್ನಿ ರೋಮಿ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್​ ಬ್ರಿಟನ್​ನ ಗ್ಲಾಸ್ಗೋದಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದ ಶೂಟಿಂಗ್​ನ ಬಿಡುವಿನ ವೇಳೆ ಕೈಗೆ ಸಿಕ್ಕ ಬ್ಯಾಟ್​ ಹಿಡಿದ ದೀಪಿಕಾ, ತಮ್ಮ ಪತಿ ರಣವೀರ್​ ಸಿಂಗ್​ ಅವರನ್ನೇ ಚೆಂಡು ಎಂದು ಭಾವಿಸಿ ಬ್ಯಾಟ್​ ಬೀಸುತ್ತಿದ್ದಾರೆ… ಪೆಟ್ಟು ತಿಂದ ರಣವೀರ್​ ಎದ್ದೆದ್ದು ಕುಣಿಯುತ್ತಿದ್ದಾರೆ. ಈ ಹಾಸ್ಯದ ದೃಶ್ಯವನ್ನು ರಣವೀರ್​ ಸಿಂಗ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಹತ್ತಿರತ್ತಿರ 2 ಲಕ್ಷ ಜನರು ನೋಡಿದ್ದಾರೆ. 28 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *