More

  ಪಿಜಿಯಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ಹಂಚಿಕೊಂಡ ನಟಿ ದೀಪಿಕಾ ಕಾಕರ್

  ಮುಂಬೈ: ಗಗನಸಖಿಯಾಗಿ ಕೆಲಸ ಪ್ರಾರಂಭಿಸಲು ಮುಂಬೈಗೆ ಬಂದ ವೇಳೆ ತಾವು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ನಟಿ ದೀಪಿಕಾ ಕಾಕರ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

  ಇದನ್ನೂ ಓದಿ: 1 ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಯುವಕ ಇನ್ನಿಲ್ಲ!

  “ಮುಂಬೈಗೆ ಬಂದ ಪ್ರಾರಂಭದ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿದ್ದೆ. ಮುಂಬೈನ ಒಂದು ಪಿಜಿಯಲ್ಲಿ ನನ್ನ ತಾಯಿಯೊಡನೆ ಉಳಿದುಕೊಂಡಿದ್ದೆ. ನಾನು ಧರಿಸುತ್ತಿದ್ದ ದುಪಟ್ಟಾಗಳನ್ನೇ ಪರದೆಯಾಗಿ ಮಾಡಿಕೊಂಡು ಅಲ್ಲಿ ಜೀವನ ಮಾಡುತ್ತಿದ್ದೆ. ಒಂದು ಚಿಕ್ಕ ಬ್ಯಾಗ್ ಮತ್ತು ಸೂಟ್​ಕೇಸ್ ಹಿಡಿದು ಮುಂಬೈಗೆ ಬಂದ ನಾನು, ದೊಡ್ಡ ರೂಂಗಳಲ್ಲಿ ವಾಸ ಮಾಡುವಷ್ಟು ಸಂಪಾದನೆಯನ್ನು ಹೊಂದಿರಲಿಲ್ಲ” ಎಂದು ಹೇಳಿದರು.

  “12-15 ಸಾವಿರ ರೂ. ಸಂಬಳ ಪಡೆಯುವವರಿಗೆ ಊಟ, ಬಾಡಿಗೆ, ಓಡಾಟದ ಖರ್ಚು ಎಲ್ಲವನ್ನೂ ನಿಭಾಯಿಸುವುದು ಕಷ್ಟಕರ. ನನ್ನ ಕಠಿಣ ದಿನಗಳ ಬಗ್ಗೆ ಈಗಲೂ ನನಗೆ ಎಲ್ಲವೂ ಚೆನ್ನಾಗಿ ನೆನಪಿದೆ. ಆ ಸಮಯದಲ್ಲಿ ಆಟೋದಲ್ಲಿ ಮನೆಯ ಅರ್ಧ ದಾರಿಯವರೆಗು ಬರುತ್ತಿದ್ದೆ, ತದನಂತರ ಕಾಲ್ನಡಿಗೆಯಲ್ಲಿ ಬರುತ್ತಿದೆ. ಕಾರಣ ಆ ದಿನ ಉಳಿತಾಯ ಆಗುತ್ತಿದ್ದ ಹಣ ಬೇರೆ ಯಾವುದಕ್ಕಾದರೂ ಆಗುತ್ತಿತ್ತು” ಎಂದು ಹೇಳಿದರು.

  ಇದನ್ನೂ ಓದಿ: ನಾಯಿ ಮಾಂಸ ಮಾರಾಟ ಬ್ಯಾನ್​ ಆದೇಶವನ್ನು ರದ್ದು ಮಾಡಿದ ಗುವಾಹಟಿ ಹೈಕೋರ್ಟ್

  “ನಾನು ಮತ್ತು ನನ್ನ ತಾಯಿ ಇಬ್ಬರು ಬಹಳ ದಿನಗಳ ಕಷ್ಟವನ್ನು ಅನುಭವಿಸಿದ್ದೇವೆ. ನಮಗೆ ಹಾಸಿಗೆ, ದಿಂಬು, ಸ್ಟೌವ್, ಬೆಡ್​ಶೀಟ್​ಗಳು ಇದ್ಯಾವುದನ್ನು ಖರೀದಿ ಮಾಡಲು ಶಕ್ತಿ ಇರಲಿಲ್ಲ! 300-400 ರೂ. ಹಣ ಕೊಟ್ಟು ಒಂದು ಹಾಸಿಗೆ ಖರೀದಿಸಿದೆ. ತದನಂತರ ಮುಂದಿನ 15-20 ದಿನಗಳ ಕಾಲ ನನಗೆ ಸಂಬಳವೇ ಬಂದಿರಲಿಲ್ಲ. ಒಂದೇ ಹಾಸಿಗೆಯಲ್ಲಿ ನಾನು ನನ್ನ ತಾಯಿ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ನಿದ್ರೆ ಮಾಡುತ್ತಿದ್ದೆವು” ಎಂದು ತಮ್ಮ ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts