ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ಚನ್ನಮ್ಮನ ಕಿತ್ತೂರು: ತಾಲೂಕಿನ ಮೇಟ್ಯಾಲ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಪ್ರವೀಣ ಜೈನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತುರಕರ ಶೀಗಿಹಳ್ಳಿ ಗ್ರಾಪಂ ಅಧ್ಯಕ್ಷ ಅದೃಶ್ಯಪ್ಪ ವೆಂಕಟಪ್ಪನವರ, ಶಿಕ್ಷಣ ಪಡೆಯುವುದಕ್ಕಾಗಿ ನಿತ್ಯ ನಿಚ್ಚಣಿಕಿ, ಶಿವನೂರು, ಮರಿಗೇರಿ, ಮೇಟ್ಯಾಲ ಹಾಗೂ ತುರಕರ ಶಿಗೀಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಕಿತ್ತೂರ ಪಟ್ಟಣಕ್ಕೆ ತೆರಳುತ್ತಾರೆ. ಆದರೆ, ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಬೈಲಹೊಂಗಲದ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ  ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಣಿ ಚನ್ನಮ್ಮಾ ನವ ಭಾರತ ಸೇನೆಯ ಮುಖ್ಯ ಸಂಚಾಲಕ ಜಗದೀಶ ಕಡೋಲಿ, ಮಾರುತಿ ಹರಿಜನ, ಮಂಜುನಾಥ ಮಾಳಗಿ, ಸಿದ್ದಪ್ಪ ಮಾಳಗಿ, ಚನ್ನಬಸಪ್ಪ ಬೆಳವಡಿ, ಮಂಜುನಾಥ ಮರಿಗೌಡರ, ಬಸವರಾಜ ಶಿವಪೂಜಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *