17.8 C
Bengaluru
Wednesday, January 22, 2020

ಅನ್ನಭಾಗ್ಯ ಅಕ್ಕಿ ಪ್ರಮಾಣ ಇಳಿಕೆ? 408 ಕೋಟಿ ರೂ ಉಳಿತಾಯ 

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

| ಬೇಲೂರು ಹರೀಶ ಬೆಂಗಳೂರು

ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್​ದಾರರಿಗೆ ವಿತರಿಸುವ 7 ಕೆಜಿ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಿ, ಬದಲಿಗೆ 2 ಕೆಜಿ ಗೋಧಿ ಮತ್ತು 1 ಕೆಜಿ ತೊಗರಿ ಬೇಳೆ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಕೇಂದ್ರದ ಹೆಸರಿನಲ್ಲೇ ಯೋಜನೆ ನೀಡಲು ನಿರ್ಧರಿಸಲಾಗಿದೆ.

720 ಕೋಟಿ ರೂ. ಹೊರೆ: ಬೆಲೆ ಏರಿಕೆ, ದಾಸ್ತಾನು ಕೊರತೆ, ಅನುದಾನದ ಹೊರೆ ಹಿನ್ನೆಲೆಯಲ್ಲಿ ತೊಗರಿ ಬೇಳೆಯನ್ನು ಕಳೆದ ನವೆಂಬರ್​ನಿಂದ ಕಾರ್ಡ್​ದಾರರಿಗೆ ನೀಡುವುದನ್ನು ಸ್ಥಗಿತಗೊಳಿಸಲಾಯಿತು. ಒಂದು ವೇಳೆ ಬಿಜೆಪಿ ಸರ್ಕಾರ ಮತ್ತೆ ಇದನ್ನು ಜಾರಿಗೆ ತಂದರೆ ವರ್ಷಕ್ಕೆ 720 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆ ಬೀಳಲಿದೆ. ರಾಜ್ಯದಲ್ಲಿ 1,40,84,911 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳಿವೆ.

ಪ್ರತಿ ತಿಂಗಳು ಆಂದಾಜು 60 ಕೋಟಿ ರೂ. ಮೊತ್ತದ 13 ಸಾವಿರ ಟನ್ ಬೇಳೆ ಬೇಕಿದೆ. ಇದರಿಂದ ವರ್ಷಕ್ಕೆ 720 ಕೋಟಿ ರೂ. ಖರ್ಚಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಬೇಳೆ ಖರೀದಿಸಿ ಕಾರ್ಡ್​ದಾರರಿಗೆ 38 ರೂ.ನಂತೆ ನೀಡಲಾಗುತ್ತದೆ. ಅಲ್ಲದೆ, ಬೇಳೆಯ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಕೊಡುತ್ತದೆ.

2 ಕೆಜಿ ಗೋಧಿ ವಿತರಣೆ?: ಕಾರ್ಡ್​ದಾರರಿಗೆ 2017ರ ಜೂನ್/ಜುಲೈನಲ್ಲಿ ಅಕ್ಕಿ ಪ್ರಮಾಣವನ್ನು 7ಕೆಜಿಗೆ ಏರಿಸಿ 2 ಕೆಜಿ ನೀಡುತ್ತಿದ್ದ ಗೋಧಿಯನ್ನು ಅಂದಿನ ಸರ್ಕಾರ ನಿಲ್ಲಿಸಿತ್ತು. ಅದರಂತೆ, ಅಲ್ಲಿಂದ ಈವರೆಗೆ ಪ್ರತಿ ತಿಂಗಳು ಕಾರ್ಡ್ ದಾರರಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿದೆ. ಈಗ 2 ಕೆಜಿ ಅಕ್ಕಿ ಕಡಿತಗೊಳಿಸಿ ಬದಲಿಗೆ 2 ಕೆಜಿ ಗೋಧಿ ನೀಡುವ ಚಿಂತನೆ ಇದೆ.

408 ಕೋಟಿ ರೂ. ಉಳಿತಾಯ: ಕೇಂದ್ರದ ಸಹಕಾರ ದೊಂದಿಗೆ 5 ಕೆಜಿ ಅಕ್ಕಿ ಜತೆಗೆ ರಾಜ್ಯ ಸರ್ಕಾರವು ಹೆಚ್ಚುವರಿ 2 ಕೆಜಿ ಸೇರಿಸಿ ಒಟ್ಟು 7 ಕೆಜಿ ಅಕ್ಕಿ ನೀಡುತ್ತಿದೆ. ಹೆಚ್ಚುವರಿ 2 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಮಾರುಕಟ್ಟೆಯಲ್ಲಿ ತಿಂಗಳಿಗೆ ಪ್ರತಿ ಕೆಜಿಗೆ 29 ರೂ.ನಂತೆ 214 ಕೋಟಿ ರೂ. ವ್ಯಯಿಸಿ 74 ಸಾವಿರ ಮೆಟ್ರಿಕ್ ಟನ್ ಖರೀದಿಸುತ್ತಿದೆ.

2 ಕೆಜಿ ಅಕ್ಕಿ ಬದಲು 2 ಕೆಜಿ ಗೋಧಿ ವಿತರಿಸಿದರೆ ಪ್ರತಿ ಕೆಜಿಗೆ 24 ರೂ.ನಂತೆ 185 ಕೋಟಿ ರೂ.ವ್ಯಯಿಸಿ 74 ಸಾವಿರ ಮೆಟ್ರಿಕ್ ಟನ್ ಖರೀದಿಸಿದರೆ ತಿಂಗಳಿಗೆ 34 ಕೋಟಿ ರೂ. ನಂತೆ ವರ್ಷಕ್ಕೆ 408 ಕೋಟಿ ರೂ. ಉಳಿತಾಯವಾಗಲಿದೆ.

ಅಕ್ಕಿ ಜತೆಗೆ ರಾಗಿ ವಿತರಣೆ: ರಾಜ್ಯದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್​ದಾರರಿಗೆ ಅಕ್ಕಿ ಜತೆಗೆ ಸದ್ಯ ರಾಗಿ ವಿತರಿಸಲಾಗುತ್ತಿದೆ. ಪ್ರತಿ ಸದಸ್ಯರಿಗೆ 7 ಕೆಜಿ ಬದಲು 4 ಕೆಜಿ ವಿತರಿಸಿ ಉಳಿದ ಅಕ್ಕಿ ಬದಲು 3 ಕೆಜಿ ರಾಗಿ ವಿತರಣೆ ಮಾಡಲಾಗುತ್ತಿದೆ. ಇನ್ನೂ ಕೆಲ ಕಡೆಗಳಲ್ಲಿ ಕೇವಲ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಈ ಬಗ್ಗೆ ಇಲಾಖೆಗೆ ದೂರುಗಳು ಬರುತ್ತಿವೆ.

ಕೇಂದ್ರದಿಂದ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ: ರಾಜ್ಯದಲ್ಲಿ 7,62,628 ಅಂತ್ಯೋದಯ, 20,07601 ಎಪಿಎಲ್ ಹಾಗೂ 1,18,87,236 ಬಿಪಿಎಲ್ ಕಾರ್ಡ್​ಗಳಿವೆ. ಈ ಎಲ್ಲ ಕಾರ್ಡ್​ಗಳಿಂದ ಸೇರಿ ಒಟ್ಟು 4,98,09351 ಕುಟುಂಬದ ಸದಸ್ಯರಿದ್ದಾರೆ.

ಹೀಗಾಗಿ, ಕೇಂದ್ರದ ಸಹಕಾರದೊಂದಿಗೆ ಸರ್ಕಾರವು ಆಹಾರ ಧಾನ್ಯ ವಿತರಣೆ ಮಾಡುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರವು ಪ್ರತಿ ಕೆಜಿಗೆ ಅಕ್ಕಿಗೆ 30 ರೂ.ನಂತೆ ಖರೀದಿಸಿ ರಾಜ್ಯಕ್ಕೆ 3 ರೂ.ನಂತೆ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡುತ್ತಿದೆ.

ಪ್ರಸ್ತಾವನೆಗೆ ಒಪ್ಪಿಗೆ?

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇರುವುದರಿಂದ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚಾಗಿ ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಗೋಧಿ ಖರೀದಿಸಿ ಆಹಾರ ಗೋದಾಮಿನಲ್ಲಿ ಸಂಗ್ರಹಿಸಿದೆ. ಕಾರ್ಡ್​ದಾರರಿಗೆ ಗೋಧಿ ಪೂರೈಕೆ ಮಾಡಲು ಮೊದಲಿನಿಂದಲೂ ಕೇಂದ್ರದ ಒಪ್ಪಿಗೆಯಿದೆ.

ಆರೋಗ್ಯ ದೃಷ್ಟಿಯಿಂದ ಫಲಾನುಭವಿಗಳಿಗೆ ಗೋಧಿ ವಿತರಿಸಲು ಚಿಂತನೆಯಿದೆ. ಗೋಧಿ ವಿತರಿಸುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷದಲ್ಲಿ 408 ಕೋಟಿ ರೂ. ಉಳಿತಾಯವಾಗಲಿದೆ.

| ಎಂ.ಸಿ.ಗಂಗಾಧರ, ಆಹಾರ ಇಲಾಖೆ ಜಂಟಿ ನಿರ್ದೇಶಕ

ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಿ 2 ಕೆಜಿ ಗೋಧಿ ವಿತರಿಸಲು ನಮ್ಮದೇನು ಅಭ್ಯಂತರವಿಲ್ಲ. ಆದರೆ, ನಿಗದಿತ ಸಮಯದಲ್ಲಿ ನಮಗೆ ಕಮಿಷನ್ ಬಿಡುಗಡೆ ಮಾಡಬೇಕಷ್ಟೆ.

| ಟಿ.ಕೃಷ್ಣಪ್ಪ ಅಧ್ಯಕ್ಷ, ರಾಜ್ಯ ಪಡಿತರ ವಿತರಕ ಸಂಘ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...