ಪಾರ್ವತಿ ಅಮ್ಮನವರಿಗೆ ತರಕಾರಿಗಳಿಂದ ಅಲಂಕಾರ

ಗುಂಡ್ಲುಪೇಟೆ: ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮೂರನೇ ಆಶಾಢ ಶುಕ್ರವಾರದ ಅಂಗವಾಗಿ ಪಾರ್ವತಿ ಅಮ್ಮನವರಿಗೆ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಪ್ರಧಾನ ಅರ್ಚಕ ಶಂಕರ ನಾರಾಯಣ ಜೋಯಿಸ್ ನೇತೃತ್ವದಲ್ಲಿ ದೇವಸ್ಥಾನದ ಶಿವಲಿಂಗ, ಪಾರ್ವತಿ ಅಮ್ಮನಿಗೆ ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ನಾಗರಿಕರು ನೀಡಿದ ವಿವಿಧ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಟಣ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *