ಶಿವಮೊಗ್ಗ: ರಾಜ್ಯದಲ್ಲಿ 2012ರಲ್ಲಿ 95.16 ಲಕ್ಷ ಗೋವುಗಳಿದ್ದವು. 2019ರಲ್ಲಿ ಈ ಸಂಖ್ಯೆ 84.69 ಲಕ್ಷಕ್ಕೆ ಕುಸಿದಿದೆ. ಗೋವುಗಳ ಸಂಖ್ಯೆ ಇಳಿಮುಖವಾಗಲು ಸರ್ಕಾರದ ಧೋರಣೆ ಕಾರಣ. ಗೋವುಗಳು ಕಾಯಿಲೆಯಿಂದ ಸಾಯುತ್ತಿಲ್ಲ. ಅವುಗಳನ್ನು ಕಳವು ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಯಿಖಾನೆಯಲ್ಲಿ ಸಾಯಿಸಿದ ಬಳಿಕ ತ್ಯಾಜ್ಯವನ್ನು ನದಿಗೆ ಎಸೆಯಲಾಗುತ್ತಿದೆ ಎಂದು ಚನ್ನಬಸಪ್ಪ ದೂರಿದರು. ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ಹಲವು ಕೊರತೆಗಳಿವೆ. ಇದಕ್ಕಾಗಿ ಅನುದಾನ ಕೋರಿದರೆ ಹಣ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದ್ದು, ಅನುದಾನಕ್ಕಾಗಿ ನಾವು ಹೋರಾಟ ಮಾಡಲು ಸಿದ್ಧ ಎಂದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಪಾಲಿಕೆಯಿಂದ ಗೋಶಾಲೆ ನಿರ್ಮಿಸಲು ಜಿಲ್ಲಾಡಳಿತ ಭೂಮಿ ಗುರುತಿಸಲಾಗಿತ್ತು. ಅಲ್ಲಿರುವ ಸಣ್ಣ ಪುಟ್ಟ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶಗಳಿದ್ದವು. ಆದರೆ ಅಲ್ಲಿ ಗೋಶಾಲೆಯನ್ನೇ ನಿರ್ಮಾಣ ಮಾಡಬಾರದು ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಈಗ ಆ ತಡೆಯಾಜ್ಞೆಯನ್ನು ಕೋರ್ಟ್ ತೆರವು ಮಾಡಿದೆ. ಶೀಘ್ರ ಗೋಶಾಲೆ ನಿರ್ಮಾಣ ಆಗಲಿದೆ ಎಂದು ಚನ್ನಬಸಪ್ಪ ಹೇಳಿದರು.
ಗೋವಿನ ಸಂಖ್ಯೆ ಇಳಿಮುಖ: ಶಾಸಕ ಚೆನ್ನಿ ಆತಂಕ

You Might Also Like
ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…