ಕೊಪ್ಪ: ಹುಚ್ಚುರಾಯರ (ಹಿರೀಕೆರೆ) ಕೆರೆ ಮೇಲ್ಫಾದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಲೇಔಟ್‌ಗೆ ಸಂಬಂಧಿಸಿಂದತೆ ಕೊಪ್ಪ ಗ್ರಾಮಾಂತರ ಗ್ರಾಪಂ ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ತರಿಸಿಕೊಂಡು ವಿಶೇಷ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲು ಪಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಹುಚ್ಚುರಾಯರ ಕೆರೆ ಕೊಪ್ಪ ಪಟ್ಟಣ ಪಂಚಾಯಿತಿ ಸ್ವತ್ತಾಗಿದೆ. ಲೇಔಟ್ ಇರುವ ಸ್ವತ್ತು ಕೊಪ್ಪ ಗ್ರಾಮಾಂತರ ಗ್ರಾಪಂಗೆ ಸೇರಿದೆ. ಅವರ ಸ್ವತ್ತಿನ ಮೇಲೆ ನಮಗೆ ಹಕ್ಕು ಚಲಾಯಿಸಲು ಅಧಿಕಾರವಿಲ್ಲ. ಅವರ ಬಳಿ ಇರುವ ದಾಖಲೆಗಳನ್ನು ಕಚೇರಿ ತರಿಸಿಕೊಂಡು ಲೇ ಔಟ್‌ನಿಂದ ಕೆರೆಗೆ ತೊಂದರೆಯಾಗುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಪಪಂ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಹುಚ್ಚುರಾಯರ ಕೆರೆ ನೀರು ಕುಲುಷಿತವಾಗಲು ನಾವು ಬಿಡುವುದಿಲ್ಲ. ಈ ಸಂಬಂಧ ದಾಖಲೆಗಳನ್ನು ನೀಡಿ ಹಾಗೂ ಲೇ ಔಟ್‌ನ ಮಾಲೀಕರು ಕೆರೆ ಕಲುಷಿತವಾಗದಂತೆ ಯಾವ ರೀತಿ ಯೋಜನೆಯನ್ನು ಸಿದ್ದಪಡಿಸಿಕೊಂಡಿದ್ದಾರೆ ಎಂಬುದು ತಿಳಿದಿಕೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ ಪಟ್ಟಣ ಪಂಚಾಯಿತಿ ಮುಂದೆ ಬಿಜೆಪಿಯವರು ಪ್ರತಿಭಟನೆ ಮಾಡಿರುವುದು ಕ್ರಮವಲ್ಲ. ದುರುದ್ದೇಶದಿಂದ ಶಾಸಕರ ಮೇಲೆ ಆರೋಪ ಮಾಡಲಾಗಿದೆ. ಗ್ರಾಪಂ 38 ಇ-ಸ್ವತ್ತು ಸೃಷ್ಟಿ ಮಾಡಿದ್ದಾರೆ. ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಿ ಎಂದುರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಇದಿನಬ್ಬ ಮಾತನಾಡಿ, ಲೇಔಟ್ ನಿರ್ಮಾಣಕ್ಕೆ ಗ್ರಾಪಂ ನವರು ನೀರಕ್ಷೇಪಣಾ ಪತ್ರ ನೀಡುವ ಮುನ್ನ ಸ್ಥಳೀಯ ಅಭಿಪ್ರಾಯ ಪಡೆದಿಲ್ಲ. ಗ್ರಾಪಂ ವುಗಳನ್ನು ಪರಿಶೀಲಿಸದೆ ಏಕಾಏಕಿ ಅನುಮತಿ ನೀಡಿದ್ದಾರೆ ಇದು ಸರಿಯಲ್ಲ ಎಂದರು.
ಪಪಂ ಮುಖ್ಯಧಿಕಾರಿ ಚಂದ್ರಕಾಂತ್ ಮಾತನಾಡಿ, ಗ್ರಾಮ ಪಂಚಾಯಿತಿಯವರು ಲೇಔಟ್ ನಿರ್ಮಾಣಕ್ಕೆ ಸಂಪೂರ್ಣ ದಾಖಲೆಗಳನ್ನು ಒದಗಿಸಿ ಇ-ಸ್ವತ್ತು ಸಹ ದಾಖಲಿಸಿದ್ದಾರೆ. ಕಾನೂನಿನಲ್ಲಿ ಗ್ರಾಪಂಗೆ ಇರುವ ಅವಕಾಶಗಳನ್ನು ಗಮನದಲ್ಲಿ ಇರಿಸಿಕೊಂಡು ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು.
ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯರಾದ ಹೇಮಾವತಿ, ರಶೀದ್, ಸುಜಾತ ವಸಂತ್ ಮುಂತಾದವರಿದ್ದರು.
ಲೇಔಟ್‌ನ ದಾಖಲೆ ಸಂಗ್ರಹಕ್ಕೆ ಪಟ್ಟಣ ಪಂಚಾಯಿತಿ ನಿರ್ಧಾರ
ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone
ನವದೆಹಲಿ: ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…
ಮೊಬೈಲ್ ಹಿಡಿದುಕೊಳ್ಳುವ ಸ್ಟೈಲ್ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts
Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…
ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips
Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…