ಸಾಲಬಾಧೆಗೆ ಯುವಕ ಬಲಿ

ಖಾನಾಪುರ: ಪಾಲಕರ ಆರೋಗ್ಯ ಸಮಸ್ಯೆ ಹಾಗೂ ಸಾಲಬಾಧೆಯಿಂದ ಮನನೊಂದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಜಿಕನೂರು ಗ್ರಾಮದ ಖಾನಾಪುರ-ಚ.ಕಿತ್ತೂರು ತಾಲೂಕುಗಳ ಗಡಿಭಾಗದ ಕೃಷಿ ಜಮೀನಿನಲ್ಲಿ ಬುಧವಾರ ಸಂಭವಿಸಿದೆ.

ಜಿಕನೂರು ಗ್ರಾಮದ ಅಡಿವೆಪ್ಪ ಪೂಜೇರಿ (25) ಮೃತ. ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *