ಶಿಕಾರಿಪುರ: ತಾಲೂಕಿನಲ್ಲಿ ಮೆಕ್ಕೆಜೋಳ, ಭತ್ತದ ಜತೆಗೆ ಅಡಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಯುತ್ತಿದ್ದಾರೆ. ಆದರೆ ಹೊಸದಾಗಿ ಮಾಡುವ ಅಡಕೆ ತೋಟದಲ್ಲಿ ಶುಂಠಿ ಬೆಳೆಯುವುದು ಮತ್ತು ಪ್ರತ್ಯೇಕವಾಗಿಯೂ ಬೆಳೆಯುವುದು ಅಧಿಕವಾಗಿದೆ.
ರೈತರು ಅಧಿಕ ಲಾಭದಾಸೆಗೆ ಶುಂಠಿ ಬೆಳೆಯುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿರುವ ದರವನ್ನು ಗಮನಿಸಿದರೆ ಉತ್ಪಾದನಾ ವೆಚ್ಚವೂ ಸಿಗದಂತಾಗಿದೆ. ತಾಲೂಕಿನಲ್ಲಿ 2000 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಆದರೆ ಶುಂಠಿ ಬೆಲೆ ಮಾತ್ರ ರೈತರ ಪರಿಶ್ರಮಕ್ಕೆ ತಕ್ಕ ಹಾಗೆ ಇಲ್ಲ. ಈಗ ಕ್ವಿಂಟಾಲ್‌ಗೆ 2000-2500 ರೂ.ವರೆಗೆ ಬೆಲೆಯಿದೆ. ರಗೋಡಿ ಶುಂಠಿ 2500 ರೂ. ಮತ್ತು ಹಿಮಾಚಲ ಶುಂಠಿ 2000 ರೂ. ದರ ಇದೆ.
ಈಗ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ರೈತರಿಗೆ ಜಾಸ್ತಿ ಆಗುತ್ತಿರುವುದರಿಂದ ಈಗಿರುವ ಶುಂಠಿ ಬೆಲೆಯಿಂದ ರೈತರಿಗೆ ಏನೂ ಉಳಿಯುವುದಿಲ್ಲ. ಜತೆಗೆ ಶುಂಠಿ ಬೆಲೆ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಅರುಣಾಚಲ ಪ್ರದೇಶ, ಮಿಜೋರಾಂ ರಾಜ್ಯಗಳಂತೆ ಶುಂಠಿಗೆ ಇತರೆ ಬೆಳೆಗಳಂತೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಬೆಳೆಗಾರರ ಒತ್ತಾಯ.
2016-17ರಲ್ಲಿ ಅರುಣಾಚಲ ಪ್ರದೇಶ ಸರ್ಕಾರ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ ಶುಂಠಿ ಖರೀದಿ ಮಾಡಿತ್ತು. ಅದೇ ರೀತಿ ಮಿಜೋರಾಂನಲ್ಲಿ ಕಳೆದ ವರ್ಷ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಶುಂಠಿ ಕ್ವಿಂಟಾಲ್ಗೆ 5000 ರೂ. ನಿಗದಿಪಡಿಸಿತ್ತು. ಇದೇ ರೀತಿ ಕರ್ನಾಟಕದಲ್ಲೂ ಶುಂಠಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ಖರೀದಿ ಕೇಂದ್ರ ಸ್ಥಾಪಿಸಲಿ: ತಾಲೂಕಿನ ಕಾಳೇನಹಳ್ಳಿ ಸಮೀಪ ಕೋಲ್ಡ್ ಸ್ಟೋರೇಜ್ ಕಾಮಗಾರಿ ಭರದಿಂದ ಸಾಗಿದೆ. ರೈತರು ಕೃಷಿ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಿಡಬಹುದು. ಇದರಿಂದ ಮುಂಬರುವ ದಿನಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶುಂಠಿ ಬೆಳೆಗಾರರು ಸಮಿತಿ ರಚಿಸಿಕೊಂಡು ಕ್ವಿಂಟಾಲ್ ಶುಂಠಿಗೆ ಕನಿಷ್ಠ 7000 ರೂ. ಬೆಂಬಲ ನೀಡಬೇಕು ಮತ್ತು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರು, ಕೃಷಿ ಸಚಿವರ ಗಮನ ಸೆಳೆಯಲು ಚಿಂತನೆ ನಡೆಸಿದ್ದಾರೆ.
ಪೆಚ್ಚಿನ ಸಮಸ್ಯೆ ಇತ್ಯರ್ಥ: ಶಿಕಾರಿಪುರ, ಶಿರಾಳಕೊಪ್ಪ, ತೊಗರ್ಸಿ ಸೇರಿ ಹಲವೆಡೆ ಶುಂಠಿ ಡ್ರೈಯರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಂದ ಶುಂಠಿ ಡ್ರೈ ಮಾಡಿ ದೇಶದ ವಿವಿಧ ರಾಜ್ಯಗಳಿಗೆ ಕಳಿಸಲಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾದರೂ ಬೆಳೆಗೆ ತಕ್ಕ ಬೆಲೆ ಸಿಗದ ಕಾರಣ ರೈತರು ಪರದಾಡುತ್ತಿದ್ದಾರೆ. ಈ ನಡುವೆ ಶುಂಠಿ ಪೆಚ್ಚಿನ ವಿಚಾರದಲ್ಲಿ ಖರೀದಿದಾರರು ಮತ್ತು ರೈತರ ನಡುವೆ ಜಟಾಪಟಿ ನಡೆದಿತ್ತು. ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು.
ಶುಂಠಿ ಬೆಳೆಗಾರರಿಗೆ ಸಾಲದ ಹೊರೆ

You Might Also Like
ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional
devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…
ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್ | Summer Tips
Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…
ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs
Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…