ಸಾಲಭಾದೆಗೆ ಬಲ್ಲಟಗಿ ತಾಂಡಾ ರೈತ ಆತ್ಮಹತ್ಯೆ

ಸಿರವಾರ: ತಾಲೂಕಿನ ಬಲ್ಲಟಗಿ ತಾಂಡಾ ರೈತ ನಾಗಪ್ಪ (48) ಸಾಲಭಾದೆಗೆ ವಿಷ ಸೇವಿಸಿ ಸೋಮವಾರ ತಡ ರಾತ್ರಿ ಆಹ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ನಾಗಪ್ಪ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 40 ಸಾವಿರ ರೂ. ಹಾಗೂ ಖಾಸಗಿ ಸಾಲ 7 ಲಕ್ಷಕ್ಕೂ ಹೆಚ್ಚು ಮಾಡಿಕೊಂಡಿದ್ದರು. ಇದರಿಂದ ಮನನೊಂದು ಭಾನುವಾರ ವಿಷ ಸೇವಿಸಿದ್ದರು. ಕೂಡಲೇ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.