ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ಆಲೂರು: ವಿದ್ಯುತ್ ತಂತಿ ಸ್ಪರ್ಶಿಸಿ ತಾಲೂಕಿನ ಸಿಂಗಟಕೆರೆ ನಿವಾಸಿ ನಿಂಗರಾಜು ಎಂಬುವರ ಪುತ್ರ ದುಷ್ಯಂತ್‌ಕುಮಾರ್(20) ಶುಕ್ರವಾರ ಮೃತಪಟ್ಟಿದ್ದಾನೆ.

ದುಷ್ಯಂತ್‌ಕುಮಾರ್ ಹಾಸನದಿಂದ ಪುತ್ತೂರು ಜಿಲ್ಲೆಯ ಮಾದಕಟ್ಟೆ ಹಾಲು ಉತ್ಪಾದಕರ ಸಂಘಕ್ಕೆ ಕೆಎಂಎಫ್ ಫೀಡ್ಸ್ ಅನ್ನು ಲಾರಿಯಿಂದ ಕೆಳಗಿಳಿಸಲು ಕೂಲಿ ಕಾರ್ಮಿಕನಾಗಿ ತೆರಳಿದ್ದ.

ಫೀಡ್ಸ್ ಅನ್ನು ಸಂಘಕ್ಕೆ ಕೊಟ್ಟು ಕೊಟ್ಟು ಹಿಂತಿರುಗಿ ಬರುವಾಗ ಪುತ್ತೂರು ಜಿಲ್ಲೆಯ ಕೊಳ್ನಾಡು ಗ್ರಾಮದ ಕುಡ್ತ ಮುಗೇರು ಸಮೀಪದ ಪಡಾರು ಜಂಕ್ಷನ್‌ನಲ್ಲಿ ಲಾರಿ ನಿಲ್ಲಿಸಿದ್ದ ವೇಳೆ ಲಾರಿ ಕ್ಯಾಬಿನ್ ಮೇಲೆ ಶರ್ಟ್ ಇಟ್ಟಿದ್ದನ್ನು ನೆನಪು ಮಾಡಿಕೊಂಡಿದ್ದಾನೆ.

ಶರ್ಟ್ ತಗೆದುಕೊಳ್ಳಲು ಲಾರಿ ಕ್ಯಾಬಿನ್ ಮೇಲೆ ಹೋದ ವೇಳೆ ಲಾರಿ ಮೇಲ್ಭಾಗ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದುಷ್ಯಂತ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *