ಕೊಲೆ, ರೇಪ್​ನಲ್ಲಿ ಐವರಿಗೆ ಗಲ್ಲು

Latest News

PHOTOS| ಸರ್ಜಾ ಕುಟುಂಬದಲ್ಲಿ ಗರಿಗೆದರಿದ ಮದುವೆ ಸಂಭ್ರಮ: ಭಾವಿ ಪತ್ನಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಿಂಚಿದ ಧ್ರುವ!

ಬೆಂಗಳೂರು: ಬಹುಕಾಲದ ಗೆಳತಿ ಪ್ರೇರಣಾರನ್ನು ನಟ ಧ್ರುವ ಸರ್ಜಾ ಅವರು ಭಾನುವಾರ ನಡೆಯಲಿರುವ ಶುಭ ವಿವಾಹ ಮುಹೂರ್ತದಲ್ಲಿ ವರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಜಾ...

ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಯ್ತು ಭಾರಿ ಮೊತ್ತ: ಬೆಟ್ಟದೊಡೆಯನ ಹುಂಡಿಗೆ ಹರಿದುಬಂತು ಕೋಟಿ ರೂಪಾಯಿ ಕಾಣಿಕೆ!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ತೀರ್ಥಕ್ಷೇತ್ರ ಮಲೆಮಹದೇಶ್ವರಬೆಟ್ಟದ ಹುಂಡಿಯಲ್ಲಿ ಪ್ರತಿ ತಿಂಗಳು ದಾಖಲೆಯ ಮೊತ್ತ ಸಂಗ್ರಹವಾಗುತ್ತಿದೆ. ಎಪ್ಪತ್ತೇಳು ಮಲೆಗಳ ಒಡೆಯ ಮಾದಪ್ಪ ಮತ್ತೆ ಕೋಟ್ಯಾಧೀಶರಾಗಿದ್ದಾರೆ....

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಕೋಲಾರ: ಇಬ್ಬರೂ ವಿದ್ಯಾರ್ಥಿನಿಯರು. ಇಬ್ಬರೂ ಹೈಸ್ಕೂಲ್​ನಲ್ಲಿ ಓದುತ್ತಿದ್ದವರು. ಇವೆರಡೂ ಪ್ರತ್ಯೇಕ ಪ್ರಕರಣಗಳು. ಒಬ್ಬಾಕೆಯನ್ನು ಮೋಹಿಸಿ ಗಾರೆ ಕೆಲಸಗಾರ ಒಂದೂವರೆ ತಿಂಗಳ ಹಿಂದೆ ಕೊಲೆ ಮಾಡಿದ್ದ. ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರವಾಗಿತ್ತು. ಮಾಲೂರು ತಾಲೂಕಿನಲ್ಲಿಯೇ ನಡೆದಿದ್ದ ಈ ಎರಡೂ ಪ್ರಕರಣಗಳಲ್ಲಿ ಐವರಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಜಿಲ್ಲೆಯ ಮಾಲೂರಿನಲ್ಲಿ ಆ.1ರಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಹಂತಕ ಹಾಗೂ 2014ರಲ್ಲಿ ಮಾಸ್ತಿ ಠಾಣೆಯ ವ್ಯಾಪ್ತಿ ಕುಪ್ಪೂರು ಗ್ರಾಮದಲ್ಲಿ ಬಾಲಕಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ ನಾಲ್ವರಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಬಿ.ಎಸ್.ರೇಖಾ ಶನಿವಾರ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದಾರೆ.

ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ ಮಾಲೂರು ತಾಲೂಕಿನ ಟೇಕಲ್​ನ ಟಿ.ಎಸ್.ಸತೀಶ್ ಬಾಬು (25). ಮಾಲೂರಿನ ಇಂದಿರಾ ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ. ಗಾಂಜಾ ಸೇವಿಸುತ್ತಿದ್ದ. ಮಾಲೂರಿನ ಬಿಜಿಎಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಮೇಲೆ ವ್ಯಾಮೋಹ ಹೊಂದಿದ್ದ. ಆಸೆ ತೀರಿಸಿಕೊಳ್ಳಲು ಅತ್ಯಾಚಾರಕ್ಕೆ ಯತ್ನಿಸಿದ್ದ. ಆ.1ರಂದು ವಿದ್ಯಾರ್ಥಿನಿ ಶಾಲೆ ಮುಗಿಸಿಕೊಂಡು ಮಾಲೂರು ರೈಲು ನಿಲ್ದಾಣ ಮೂಲಕ ಮನೆಗೆ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದು ಬಲಾತ್ಕಾರಕ್ಕೆ ಯತ್ನಿಸಿದಾಗ, ರಕ್ಷಣೆಗಾಗಿ ಬಾಲಕಿ ಕೂಗಿಕೊಂಡಿದ್ದಳು. ಆಕೆಯನ್ನು ರೈಲ್ವೆ ಹಳಿ ಮೇಲೆ ಕಲ್ಲಿನಿಂದ ತಲೆಗೆ ಜಜ್ಜಿ ಭೀಕರವಾಗಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ.

ವಿಶೇಷ ತಂಡ ರಚನೆ: ಘಟನೆ ನಡೆದ ಎರಡು ದಿನಕ್ಕೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮತ್ತಿನಲ್ಲಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಮಾಲೂರು ಪೊಲೀಸರು ಆರೋಪಪಟ್ಟಿ ಸಲ್ಲಿದಿದ್ದರು. 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಬಿ.ಎಸ್.ರೇಖಾ ಆ.25 ರಿಂದ ಸೆ.14ವರೆಗೂ 29 ಪ್ರಮುಖ ಸಾಕ್ಷಿಗಳ ಹೇಳಿಕೆ ಪಡೆದು ಆರೋಪ ಸಾಬೀತಾದ ಹಿನ್ನೆಲೆ ಶನಿವಾರ ಮಧ್ಯಾಹ್ನ 3.30ಕ್ಕೆ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟಿಸಿದರು. ಕೊಲೆ ಪ್ರಕರಣವೊಂದರಲ್ಲಿ ಆರೋಪಿಗೆ ಕೇವಲ 45 ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿರುವುದು ಐತಿಹಾಸಿಕ ತೀರ್ಪು ಎಂಬುದು ಜಿಲ್ಲೆಯ ಬಹುತೇಕ ವಕೀಲರ ಅಭಿಪ್ರಾಯ. ಆರೋಪಿ ಪರ ವಾದಿಸಲು ವಕೀಲರು ಯಾರೂ ಮುಂದೆ ಬರದಿದ್ದ ಕಾರಣ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ನೇಮಿಸಲಾಗಿತ್ತು. ಆರೋಪಿ ವಿರುದಟಛಿ ಸರ್ಕಾರದ ವಿಶೇಷ ಅಭಿಯೋಜಕ ಎಸ್.ಮುನಿಸ್ವಾಮಿ ಗೌಡ ವಾದಿಸಿದರು.

ನಾಲ್ವರು ಅತ್ಯಾಚಾರಿಗಳಿಗೂ ನೇಣು ಶಿಕ್ಷೆ

2014ರ ಜೂ.28ರಂದು ಮಾಲೂರು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 16 ವರ್ಷದ ವಿದ್ಯಾರ್ಥಿನಿ ಮೇಲೆ ಅದೇ ಗ್ರಾಮದ ಮುನಿಕೃಷ್ಣ(27), ನಾರಾಯಣಸ್ವಾಮಿ(25), ಅನಿಲ್ ಕುಮಾರ್(24)ಹಾಗೂ ಕೃಷ್ಣ(24) ಎಂಬುವರು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿದ್ದರು. ಬಾಲಕಿ ತನ್ನ ಮನೆಯಿಂದ ಶಾಲೆಗೆ ಹೋಗಲು ಗ್ರಾಮದ ನೀಲಗಿರಿ ತೋಪನ್ನು ಹಾದು ಹೋಗುವಾಗ ಅಪಹರಿಸಿ ಅತ್ಯಾಚಾರವೆಸಗಿದ್ದರು. ಕೃತ್ಯದಿಂದ ಬಾಲಕಿ ಶಾಲೆ ತೊರೆದಿದ್ದಳು. ಸರ್ಕಾರ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿತ್ತು. ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಬಾಲಕಿ ಪರವಾಗಿ ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮತ್ತು ಅವರ ತಂಡ ವಕಾಲತ್ತು ವಹಿಸಿತ್ತು. ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶೆ ಬಿ.ಎಸ್.ರೇಖಾ ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಗಾಂಜಾ ವ್ಯಸನಿಯಾಗಿದ್ದ ಸತೀಶ್​ಬಾಬು

ಅಪರಾಧಿ ಸತೀಶ್ ತನ್ನ ತಂದೆಯಿಂದ ತೊಂದರೆ ಹಾಗೂ ಗಾರೆ ಕೆಲಸ ಮಾಡುವಾಗ ಕೆಲವರಿಂದ ಪ್ರಚೋದನೆಗೆ ಒಳಗಾಗಿ ಗಾಂಜಾ ಸೇವಿಸಲು ಆರಂಭಿಸಿದ. ತಾಯಿ ಮಾಲೂರಿನಲ್ಲಿ ಹೂ ಕಟ್ಟಿ ಮಾರಾಟ ಮಾಡುತ್ತ ಸಂಸಾರ ನಡೆಸುತ್ತಿದ್ದರು.

ಚಿಕ್ಕಂದಿನಲ್ಲಿ ಅತ್ಯಂತ ಸೌಮ್ಯ ಸ್ವಭಾವದವನಾಗಿದ್ದ ಸತೀಶ್ ಗಾಂಜಾ ಸೇವನೆಯಿಂದ ಮಾನಸಿಕವಾಗಿ ಬದಲಾಗಿದ್ದ. ಯಾರಾದರೂ ಬುದಿಟಛಿ ಹೇಳಿದರೆ ಅವರ ಮೇಲೆ ಸಿಟ್ಟು ಮಾಡಿಕೊಂಡು ದರ್ಪ ತೋರುತ್ತಿದ್ದ. ಮೊಬೈಲ್ ಕೊಡಿಸುತ್ತಿಲ್ಲವೆಂದು ಅನೇಕ ಸಾರಿ ತಾಯಿ ಮೇಲೆ ರೇಗಾಡಿದ್ದ.

ತಾನು ಕೆಲಸ ಮಾಡುತ್ತಿದ್ದ ಪ್ರದೇಶದಲ್ಲೇ ವಾಸವಾಗಿದ್ದ ವಿದ್ಯಾರ್ಥಿನಿ ಮೇಲೆ ಕಣ್ಣಿಟ್ಟಿದ್ದ. ಪ್ರೀತಿ ನೆಪದಲ್ಲಿ ಅವಳ ಬಳಿ ಇದ್ದ ಮೊಬೈಲ್ ಖದಿಯಲು ಹೊಂಚು ಹಾಕಿದ್ದ. ಆಕೆ ಭಯಸ್ಥಳು ಎಂಬುದನ್ನು ಅರಿತ ಸತೀಶ್, ಅವಳನ್ನು ಅನೇಕ ಬಾರಿ ಹಿಂಬಾಲಿಸಿ ಮೊಬೈಲ್ ಕಸಿದುಕೊಳ್ಳಲು ವಿಫಲಯತ್ನಿಸಿದ್ದ.

ಅ.1ರಂದು ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಗಾಂಜಾ ಮತ್ತಿನಲ್ಲಿದ್ದ ಸತೀಶ್ ತನ್ನ ಹೇಯ್ಯಕೃತ್ಯವನ್ನು ತೋರಿಸಿಯೇ ಬಿಟ್ಟ. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ. ಈ ಪಾಪಕ್ಕೆ ಈಗ ಮರಣ ದಂಡನೆಗೆ ಗುರಿಯಾಗಿದ್ದಾನೆ. 128 ಪುಟಗಳ ತೀರ್ಪು ಸಿದಟಛಿಪಡಿಸಿದ ನ್ಯಾಯಾಧೀಶರು ಬಲವಾದ ಸಾಕ್ಷಿಗಳಿದ್ದರಿಂದ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ವಯ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಹೆಣೆಗೆ ಕುಂಕುಮ ಬಳಿದುಕೊಂಡು ಸಭ್ಯನಂತೆ ಪೊಲೀಸರೊಂದಿಗೆ ನ್ಯಾಯಾಲಯಕ್ಕೆ ಬಂದ ಸತೀಶ್ ಸ್ವಲ್ಪವೂ ವಿಚಿಲಿತನಾಗಿರಲಿಲ್ಲ. ನ್ಯಾಯಾಧೀಶರು ನಿನಗೆ ಶಿಕ್ಷೆಯಾಗಿದೆ. ನಿನ್ನ ಪರ ವಕೀಲರು ಯಾರಿದ್ದಾರೆಂದು ಹೇಳಿದಾಗಲೂ ಮೌನವಾಗಿಯೇ ಇದ್ದ. ಆರೋಪಿ ಪರ ವಾದಿಸಲು ಕಾನೂನು ಸೇವಾ ಪ್ರಾಧಿಕಾರ ನೇಮಿಸಿದ್ದ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡು ಆರೋಪಿಯ ಪರವಾಗಿ ವಾದಿಸುವುದು ಏನಾದರೂ ಇದೆಯೇ ಎಂದು ನ್ಯಾಯಾಧೀಶರು ಕೇಳಿದರಾದರು ಎಲ್ಲ ಸಾಕ್ಷಿಗಳು ಆರೋಪಿತನ ವಿರುದಟಛಿವಾಗಿದ್ದರಿಂದ ಹಾಗೂ ಆರೋಪಿಯ ಕಡೆಯವರು ಯಾರೂ ಇಲ್ಲದಿದ್ದರಿಂದ ವಾದಿಸಲು ಅಸಹಾಯಕರಾದರು.

ಅಪ ರಾಧಿಗ ಳಿಗ ಸಿಂಹ ಸ್ವಪ್ನ ನ್ಯಾಯಾಧೀಶೇ ರೇಖಾ 

ಫೋಸ್ಕೋ ಕಾಯ್ದೆಯಡಿ ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಮೂಲಕ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ನ್ಯಾಯಾಂಗದ ಮೇಲಿನ ಜನತೆ ನಂಬಿಕೆ ಮತ್ತು ವಿಶ್ವಾಸವನ್ನು ಗಟ್ಟಿಗೊಳಿಸಿದ್ದಾರೆ. ರೇಖಾ ಜಿಲ್ಲೆಗೆ ಬಂದು ಕೇವಲ ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ 42 ಫೋಸ್ಕೋ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ. ಫೋಸ್ಕೋ ಪ್ರಕರಣಗಳಲ್ಲದೆ ಇನ್ನಿತರ 16 ಪ್ರಕರಣದಲ್ಲೂ ತಪ್ಪಿತಸ್ಥರಿಗೆ ಸಜೆ ವಿಧಿಸುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.

ಮಾಲೂರಿನಲ್ಲಿ ಕಳೆದ ಆ.1ರಂದು ನಡೆದ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಸತೀಶ್ ಬಾಬು ಪೊಲೀಸರ ಕೈಗೆ ಸಿಗಲಾರ, ಒಂದು ವೇಳೆ ಬಂಧಿತನಾದರೂ ಕಾನೂನು ಕೈಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಪೊಲೀಸರು ಒದಗಿಸಿದ ಸಾಕ್ಷಿಗಳು, ಆರೋಪಿಯ ತಪ್ಪೊಪ್ಪಿಗೆ ಹಾಗೂ ಸರ್ಕಾರವ ವಿಶೇಷ ಅಭಿಯೋಜಕ ಎಸ್.ಮುನಿಸ್ವಾಮಿಗೌಡ ಅವರ ಸಮರ್ಥ ವಾದದಿಂದ ಆರೋಪಿಗೆ ಮರಣ ದಂಡನೆ ವಿಧಿಸಿದ್ದಾರೆ.

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...