ಹುಬ್ಬಳ್ಳಿ: ಅಪರಿಚಿತ ವಾಹನ ಡಿಕ್ಕಿ ಪರಿಣಾಮ ವ್ಯಕ್ತಿಯೊಬ್ಬರ ದೇಹ ಛಿದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದ ಸಿಮ್ಲಾ ನಗರದ ಬೈಪಾಸ್ ಬಳಿ ಭಾನುವಾರ ಸಂಭವಿಸಿದೆ.
ಮಲ್ಲೇಶ್ವರಂ ನಗರದ ನಿವಾಸಿ ವಿಜಯ ಪವಾರ (58) ಮೃತರು. ಘಟನಾ ಸ್ಥಳಕ್ಕೆ ಬೆಂಡಿಗೇರಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
