ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ. 3ರಷ್ಟು ಡಿಎ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆ ಶೇ. 3 ಹೆಚ್ಚಳ ಮಾಡಿದ್ದು, 2019ರ ಜನವರಿ 1ರಿಂದ ಪೂರ್ವಾನ್ವಯ ಆಗಲಿದೆ.

ಪ್ರಸ್ತುತ ಶೇ. 9 ತುಟ್ಟಿಭತ್ಯೆ ಇದು, ಈಗ ಇದು ಶೇ. 12ಕ್ಕೆ ಏರಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62.03 ಲಕ್ಷ ಪಿಂಚಣಿದಾರರಿಗೆ (ಒಟ್ಟಾರೆ 1.10 ಕೋಟಿ ಮಂದಿಗೆ) ಅನುಕೂಲವಾಗಲಿದೆ. ಅಲ್ಲದೆ ಇದರಿಂದಾಗಿ ಸರ್ಕಾರಕ್ಕೆ 9 ಸಾವಿರ ಕೋಟಿ ವೆಚ್ಚವಾಗಲಿದೆ.

ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತ್ರಿವಳಿ ತಲಾಕ್​ಗೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ಸಂಪುಟ ಮೂರನೇ ಸಾರಿಗೆ ಒಪ್ಪಿಗೆ ನೀಡಿದೆ. ಪರಿಷ್ಕೃತ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆಯದ ಕಾರಣ ಮತ್ತೊಮ್ಮೆ ಸುಗ್ರೀವಾಜ್ಞೆ ಜಾರಿ ಮಾಡಲು ರಾಷ್ಟ್ರಪತಿಗಳಿಗೆ ಸಂಪುಟ ಶಿಫಾರಸು ಮಾಡಿದೆ. (ಏಜೆನ್ಸೀಸ್)