ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ, ಸೊಸೆ ಕೊಲೆ

ತುಮಕೂರು: ಕುಣಿಗಲ್​ ತಾಲೂಕಿನ ಕಾಂತಯ್ಯನ ಪಾಳ್ಯದಲ್ಲಿ ಮಾವ, ಸೊಸೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈರಣ್ಣ (65), ಸೌಮ್ಯಾ (22) ಮೃತರು,

ಮೊದಲು ವೃದ್ಧ ಈರಣ್ಣ ಕೊಲೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಸೊಸೆ ಸೌಮ್ಯಾ ಕೂಡ ಹತ್ಯೆಯಾಗಿದ್ದು ಬೆಳಕಿಗೆ ಬಂದಿದೆ. ಮನೆಯಲ್ಲಿ ವೃದ್ಧ ಈರಣ್ಣ, ಮಗ ನಾರಾಯಣ, ಸೊಸೆ ಸೌಮ್ಯಾ ವಾಸವಾಗಿದ್ದರು. ಈಗ ಮಗ ನಾರಾಯಣ ನಾಪತ್ತೆಯಾಗಿದ್ದಾನೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆಯಾದ ಶಂಕೆ ವ್ಯಕ್ತವಾಗಿದೆ. ಕುಣಿಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.