Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಸೂತಕ ತಂದ ಶನಿವಾರ

Sunday, 14.01.2018, 3:03 AM       No Comments

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು 22 ಮಂದಿ ಸಾವನಪ್ಪಿದರೆ, ಜೈಪುರ ಮತ್ತು ರಾಜ್​ಕೋಟ್ ಅಗ್ನಿ ಅವಘಡದಿಂದ 8 ಜನ ಸಜೀವ ದಹನಗೊಂಡಿದ್ದಾರೆ. ಹಾಸನ ಸಮೀಪ ಕೆಎಸ್​ಆರ್​ಟಿಸಿ ವೋಲ್ವೊ ಬಸ್ ಪಲ್ಟಿಯಾಗಿ 7, ಮುಳಬಾಗಿಲು ಬಳಿ ಮರಕ್ಕೆ ಆಟೋ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಕ್ರೂಸರ್-ಟ್ರ್ಯಾಕ್ಟರ್ ಡಿಕ್ಕಿಯಾಗಿ ಐವರು ಕುಸ್ತಿಪಟುಗಳು, ಓರ್ವ ಪ್ರಯಾಣಿಕ ಹಾಗೂ ಮುಂಬೈನಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಜೈಪುರ, ರಾಜ್​ಕೋಟ್​ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 8 ಜನ ಸಜೀವ ದಹನಗೊಂಡಿದ್ದಾರೆ.


ಚಾಲಕನ ನಿದ್ರಾ ಮಂಪರಿಗೆ 7 ಬಲಿ

ಹಾಸನ: ಕೆಎಸ್​ಆರ್​ಟಿಸಿ ವೋಲ್ವೊ ಬಸ್ ಚಾಲಕನನ್ನು ಕಾಡಿದ ನಿದ್ರೆಯ ಮಂಪರು ಏಳು ಜೀವಗಳನ್ನು ಬಲಿ ಪಡೆದಿದೆ. ತಾಲೂಕಿನ ಕಾರೇಕೆರೆ ಕೃಷಿ ಕಾಲೇಜು ಬಳಿ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.

ಚಾಲಕ ಬಸವನ ಬಾಗೇವಾಡಿಯ ಶಿವಪ್ಪ ಛಲವಾದಿ (45), ನಿರ್ವಾಹಕ ರಾಯಚೂರು ಮೂಲದ ಲಕ್ಷ್ಮಣ (48), ಬೆಳ್ತಂಗಡಿ ತಾಲೂಕು ಗಂಡಿಬಾಗಿಲು ಗ್ರಾಮದ ಒಂದೇ ಕುಟುಂಬದ ಬಿಜೋ ಜಾರ್ಜ್ (26), ಸೋನಿಯಾ ಜಾನಿ (28) ಮತ್ತು ಡಯಾನಾ (20), ಧರ್ಮಸ್ಥಳ ಸಮೀಪದ ಕನ್ನಿಹಳ್ಳಿಯ ರಾಕೇಶ್ ಪ್ರಭು (36), ಬೆಂಗಳೂರಿನ ಗಂಗಾಧರ್ (58) ಸ್ಥಳದಲ್ಲೆ ಮೃತಪಟ್ಟಿದ್ದಾರೆ.

36 ಮಂದಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಉಳಿದವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ ಬಸ್​ನಲ್ಲಿ ಮೂವರು ಮಕ್ಕಳು ಸೇರಿ 43 ಜನ ಪ್ರಯಾಣಿಸುತ್ತಿದ್ದರು.


ಕುಟುಂಬದ ಮೂವರ ಸಾವು

ಮುಳಬಾಗಿಲು: ತಾಲೂಕಿನ ಗಾಜುಲಬಾವಿ ಬಳಿ ಶುಕ್ರವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ಮರಕ್ಕೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ ಪಟ್ಟು, ನಾಲ್ವರು ಗಂಭೀರ ಗಾಯ ಗೊಂಡಿದ್ದಾರೆ.

ಸುಣ್ಣಕುಪ್ಪ ಗ್ರಾಮದ ಆಟೋ ಚಾಲಕ ಭಾಸ್ಕರ್ (25), ಪಾರ್ವತಮ್ಮ (28), ಗೌರಮ್ಮ (30) ಮೃತರು. ಸಿ. ನಾರಾಯಣಪ್ಪ (50), ಶಂಕರಮ್ಮ (40), ವಿ.ಕೃಷ್ಣಮೂರ್ತಿ (30), ಎ. ಶಂಕರ್ (20) ತೀವ್ರ ಗಾಯಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣಪ್ಪ ಕುಟುಂಬ ಸಮೇತ ಖಾದ್ರಿಪುರದ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳಿ ವಾಪಸಾಗುವಾಗ ಅವಘಡ ಸಂಭವಿಸಿದೆ.


ಮುಂಬೈನಲ್ಲಿ ಹೆಲಿಕಾಪ್ಟರ್ ಪತನ

ಮುಂಬೈ: ಓಎನ್​ಜಿಸಿಯ ಪವನ್​ಹಂಸ ಹೆಲಿಕಾಪ್ಟರ್ ಪತನಗೊಂಡು ಅರಬಿಸಮುದ್ರಕ್ಕೆ ಬಿದ್ದಿದ್ದು, ಐವರ ಶವ ದೊರೆತಿದೆ. ಹೆಲಿಕಾಪ್ಟರ್​ನಲ್ಲಿ ಓನ್​ಜಿಸಿಯ ಐವರು ಸಿಬ್ಬಂದಿ ಹಾಗೂ ಇಬ್ಬರು ಪೈಲಟ್ ಇದ್ದರು. ಬೆಳಗ್ಗೆ ಮುಂಬೈನ ಜುಹುವಿನಿಂದ ಹೊರಟು ಒಡಿಎ ಆಫ್​ಶೋರ್ ಡೆವೆಲಪ್​ವೆುಂಟ್ ಏರಿಯಾ ತಲುಪುವ ಮಾರ್ಗಮಧ್ಯೆ ಎಟಸಿ ಸಂಪರ್ಕ ಕಡಿದುಕೊಂಡು ಪತನಗೊಂಡಿದೆ. ಕೂಡಲೇ ಕರಾವಳಿ ರಕ್ಷಣಾ ಪಡೆ ಮತ್ತು ಇತರೆ ರಕ್ಷಣಾ ಏಜೆನ್ಸಿಗಳು ಕಾರ್ಯಾಚರಣೆ ಆರಂಭಿಸಿ, 5 ಮೃತದೇಹ ಮೇಲಕ್ಕೆತ್ತಲಾಗಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆದಿದೆ.


ಐವರು ಕುಸ್ತಿಪಟು ದುರ್ಮರಣ

ಚಡಚಣ (ವಿಜಯಪುರ): ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ವಾಂಗಿ ಎಂಬಲ್ಲಿ ಕ್ರೂಸರ್, ಟ್ರ್ಯಾಕ್ಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಕುಸ್ತಿಪಟುಗಳು ಸೇರಿ 6 ಮಂದಿ ಮೃತಪಟ್ಟು, 8 ಜನ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಕ್ರಾಂತಿ ಕುಸ್ತಿ ಸಂಕುಲ ವಿದ್ಯಾಪೀಠಕ್ಕೆ ಸೇರಿದ ಕುಸ್ತಿಪಟುಗಳಾದ ಶುಭಂ ಅಂಕುಶ ಗಾರ್ಗೆ (23), ಸೌರಭ ಅನಿಲ ಮಾನೆ (20), ಅವಿನಾಶ ಸರ್ಜರಾವ್ ಗಾಯಕವಾಡ, ಆಕಾಶ ದಾದಾಸೋ ದೇಸಾಯಿ (23), ರಣಜೀತ ಧನವಡೆ ಮೃತರು. ಇನ್ನೊರ್ವ ಪ್ರಯಾಣಿಕನ ಹೆಸರು ತಿಳಿದುಬಂದಿಲ್ಲ. ಔಂಧ ಪಟ್ಟಣದಲ್ಲಿ ಕುಸ್ತಿ ಪಂದ್ಯಾವಳಿ ಮುಗಿಸಿಕೊಂಡು ಕ್ರೂಸರ್​ನಲ್ಲಿ ಸಾಂಗಲಿಗೆ ತೆರಳುತ್ತಿದ್ದಾಗ ಕಬ್ಬು ತುಂಬಿದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.


ಅಗ್ನಿ ದುರಂತ, 8 ಸಜೀವ ದಹನ

ರಾಜಸ್ಥಾನದ ಜೈಪುರ ಜಿಲ್ಲೆ ವಿದ್ಯಾನಗರ ನಿವಾಸವೊಂದರಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ. ಇನ್ನೊಂದೆಡೆ ಗುಜರಾತ್​ನ ರಾಜ್​ಕೋಟ್​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ರಾಷ್ಟ್ರ ಕಥಾ ಶಿಬಿರದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಮೂವರು ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top