ಪಕ್ಕದ ಮನೆ ಬಳಿ ಸತ್ತ ಇಲಿ ಎಸೆದಾತ ಏನಾದ?

ನವದೆಹಲಿ: ಸತ್ತ ಇಲಿಯನ್ನು ತಮ್ಮ ಮನೆಯ ಬಳಿ ಎಸೆದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಎಸೆದವನನ್ನು ಹತ್ಯೆಗೈದಿದ್ದಾನೆ. ನೆರೆಮನೆಯಾತ ಕಬ್ಬಿಣದ ರಾಡ್​ನಲ್ಲಿ ಹೊಡೆದ ಪರಿಣಾಮ ಆತ ಗಂಭೀರ ಗಾಯಗೊಂಡು, ನಂತರ ಮೃತಪಟ್ಟಿದ್ದಾನೆ.

ಘಟನೆಯ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
40 ವರ್ಷದ ವ್ಯಕ್ತಿಗೆ ಆತನ ನೆರೆಮನೆಯವನೇ ರಾಡ್​ನಿಂದ ಹೊಡೆದಿದ್ದ. ಸತ್ತ ಇಲಿಯನ್ನು ತಮ್ಮ ಮನೆಯ ಬಳಿ ಎಸೆದಿದ್ದಕ್ಕೆ ಕೋಪಗೊಂಡಿದ್ದ ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತದೇಹವನ್ನು ಪೋಸ್ಟ್​ ಮಾರ್ಟ್ಂಗೆ ಕಳಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.