More

    ಟಿ20 ವಿಶ್ವಕಪ್​ಗೆ ಡಿವಿಲಿಯರ್ಸ್ ವಾಪಸ್ ಸಾಧ್ಯತೆ

    ಬ್ರಿಸ್ಬೇನ್: ‘ಮಿ. 360’ ಖ್ಯಾತಿಯ ಎಬಿ ಡಿವಿಲಿಯರ್ಸ್ ಮುಂಬರುವ ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಆಡುವ ಸೂಚನೆ ನೀಡಿದ್ದಾರೆ.

    ಇದೇ ಮೊದಲ ಬಾರಿಗೆ ಬಿಗ್ ಬಾಷ್ ಲೀಗ್​ನಲ್ಲಿ ಆಡುತ್ತಿರುವ ವಿಲಿಯರ್ಸ್, ಮಂಗಳವಾರ ಬ್ರಿಸ್ಬೇನ್ ಹೀಟ್ ತಂಡದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಆಡಿದ್ದರು. 32 ಎಸೆತಗಳಲ್ಲಿ 40 ರನ್ ಸಿಡಿಸುವ ಮೂಲಕ ತಂಡದ 7 ವಿಕೆಟ್ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ 35 ವರ್ಷದ ಅವರು ಅಂತಾರಾಷ್ಟ್ರೀಯ ನಿವೃತ್ತಿ ವಾಪಸ್ ಪಡೆದು ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಾಧ್ಯತೆ ಇದೆ ಎಂದು ಹೇಳಿದರು.

    ‘ವಿಶ್ವಕಪ್ ಆಡುವುದು ನನಗೆ ಇಷ್ಟ. ಈಗಾಗಲೇ ಬೌಚ್ (ದಕ್ಷಿಣ ಆಫ್ರಿಕಾ ನೂತನ ಕೋಚ್ ಮಾರ್ಕ್ ಬೌಷರ್), ಗ್ರೇಮ್ ಸ್ಮಿತ್ (ಸಿಎಸ್​ಎ ಡೈರೆಕ್ಟರ್) ಹಾಗೂ ಫಾಫ್ (ದಕ್ಷಿಣ ಆಫ್ರಿಕಾ ನಾಯಕ) ಜತೆ ಮಾತನಾಡಿದ್ದೇನೆ. ಇದು ಸಾಧ್ಯವಾಗಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಇದು ಸಾಧ್ಯವಾಗುವ ಮುನ್ನ ಇನ್ನಷ್ಟು ಚರ್ಚೆ ಆಗಬೇಕಿದೆ’ ಎಂದು ತಿಳಿಸಿದ್ದಾರೆ. ಅವರ ವಾಪಸಾತಿಗೆ ಮುಂದಿನ ಐಪಿಎಲ್​ನಲ್ಲಿ ಪ್ರದರ್ಶಿಸುವ ಫಾಮ್ರ್ ನಿರ್ಣಾಯಕವಾಗಿರಲಿದೆ. ಈಗಾಗಲೇ ಬೌಷರ್, ಸ್ಮಿತ್ ಹಾಗೂ ಪ್ಲೆಸಿಸ್, ಟಿ20 ವಿಶ್ವಕಪ್ ವೇಳೆ ವಿಲಿಯರ್ಸ್ ಸೇವೆ ಸಿಕ್ಕಿದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts