ಜೀವನದಲ್ಲಿ ಗುರಿ ತಲುಪಬೇಕಿದ್ದರೆ ಏನು ಮಾಡಬೇಕು? ಡಿಸಿಪಿ ರವಿ ಚೆನ್ನಣ್ಣವರ್​ ಮಾತುಗಳಲ್ಲೇ ಕೇಳಿ…

ಮುಧೋಳ: ಜಗತ್ತಿನಲ್ಲಿ ಹೆತ್ತವರಷ್ಟು ಪ್ರೀತಿಸá-ವ ಜೀವ ಬೇರೆ ಇಲ್ಲ. ಆದ್ದರಿಂದ ಮೊದಲು ತಂದೆ- ತಾಯಿಗಳ ಆಸೆ ಈಡೇರಿಸಲು ವಯೋಸಹಜ ಆಸೆಗಳನ್ನು ಬದಿಗಿಟ್ಟು ಓದು ಮುಂದá-ವರಿಸಿದರೆ ಖಂಡಿತ ಗುರಿತಲುಪಲು ಸಾಧ್ಯ ಎಂದು ಬೆಂಗಳೂರು ಪ್ಚಶಿಮ ವಿಭಾಗದ ಡಿಸಿಪಿ ರವಿ ಚೆಣ್ಣನ್ನವರ ಹೇಳಿದರು.

ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ನಡೆದ ಪಪೂ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊá-ವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಕೆಳವರ್ಗದವರ ಸೇವೆಗಾಗಿ ದೊಡ್ಡ ಅಧಿಕಾರ ಪಡೆಯá-ವ ಗುರಿ ಇಟ್ಟುಕೊಂಡು ಪಠ್ಯ ಮಾತ್ರವಲ್ಲದೆ, ಸಾಧಕರ ಜೀವನ ಚರಿತ್ರೆಗಳನ್ನು ಓದá-ತ್ತ ಸಾಗಿದರೆ ಮುಂದೆ ದೊಡ್ಡ ಅಧಿಕಾರಿಯಾಗಬಹá-ದು. ಸಾಧನೆ ಮಾಡಬೇಾದರೆ ಮೊದಲು ಯಾವುದೇ ರಂಗದಲ್ಲಿರá-ವ ಸಾಧಕರಲ್ಲಿನ ಒಳ್ಳೆಯ ಗುಣ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು ಮಾತ್ರವಲ್ಲ. ನಮ್ಮನ್ನು ಕಷ್ಟಕಾಲದಿಂದ ಉತ್ತಮ ಕಾಲಕ್ಕೆ ಕರೆದೊ್ಯಯು ಸಾಧ್ಯವಾಗá-ವ ಶಿಕ್ಷಣ ಪಡೆದá-ಕೊಳ್ಳಬೇಕು. ನಾನು ಈ ಹುದ್ದೆಯಲ್ಲಿ ಇರಬೇಕೆಂದು ಕನಸು ಕಂಡು ಪರಿಶ್ರಮಪಟ್ಟರೆ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನನ್ನ ಕಾರ್ಯಕ್ಷೇತ್ರ ಬೇರೆಯಾದರೂ ನನಗೆ ಕಷ್ಟಪಟ್ಟು ಓದಿಸಿದ ನನ್ನ ತಂದೆ ತಾಯಿಗಳ ಆಸೆ ಹಾಗೂ ನನ್ನಂತಹ ಸ್ಥಿತಿ ನನ್ನೂರಿನ ಜನರಿಗೆ ಬರಬಾರದೆನ್ನುವ ದೃಷ್ಟಿಯಿಂದ 19 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕದಿಂದ ಪದವಿವರೆಗೆ ಅತ್ಯಾಧುನಿಕ ಸೌಲಭ್ಯಗಳá-ಳ್ಳ ಕಾಲೇಜು ಆರಂಭಿಸಲಾಗಿದೆ. ಮಹಾನ್ ವ್ಯಕ್ತಿಗಳನ್ನು ಪರಿಚಯಿ ಸá-ತ್ತಲೇ ಬರಲಾಗಿದೆ ಎಂದರು.

ಬೆಳಗಾವಿಯ ಪೊಲೀಸ್ ಕಮೀಷನರ್ ಡಾ. ಡಿ.ಸಿ. ರಾಜಪ್ಪ, ಶಾಸಕ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಗ್ರಾಮಿಣ ಘಟಕದ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಚನ್ನಬಸವಣ್ಣಯ್ಯ ಲಂಗೂಟಿ, ಡಿಡಿಪಿಯು ಶಶಿಧರ ಪೂಜಾರಿ, ಪ್ರಾಚಾರ್ಯ ವಿ.ಪಿ. ಪೆಟ್ಲೂರ,

ಗಿರೀಶ ಲಕ್ಷಾಣಿ, ಕೆ.ಎಚ್. ಬಳ್ಳೂರ ಮತ್ತಿತರರಿದ್ದರು. ವಿ.ಜಿ. ನೀಲವಾಣಿ, ಎಸ್.ಐ. ಕುರಬೆಟ್ಟ ನಿರೂಪಿಸಿ, ವಂದಿಸಿದರು.

ವಿಪ ಸದಸ್ಯ ಬಸವರಾಜ ಹೊರಟ್ಟಿಯವರ ತಾಯಿಯವರು ತೋಟದಲ್ಲಿ ಹತ್ತಿ ಕಟ್ಟಿಗೆ ಕಿತ್ತು ಕೈಯಲ್ಲಿ ರಕ್ತ ಬಂದರೂ ಮಗ ಚೆನ್ನಾಗಿ ಓದಲಿ ಎಂದು ಹಣ ಕಳಿಸುತ್ತಿದ್ದರು. ಅವರ ಋಣ ತೀರಿಸಲು ಅವ್ವ ಸಂಸ್ಥೆ ಮೂಲಕ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.

ರವಿ ಚೆಣ್ಣನ್ನವರ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ