ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

ಬೆಂಗಳೂರು: ನ್ಯಾಯಕ್ಕಾಗಿ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ್ದ ಸಹಾಯಕ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ನನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಹಿಳೆಯೊಬ್ಬರು ಕುಮಾರಸ್ವಾಮಿ ಲೇಔಟ್​ನಲ್ಲಿರುವ ಪೊಲೀಸ್​ ಠಾಣೆಗೆ ಬಂದಿದ್ದರು. ಆದರೆ, ಮಹಿಳೆಯ ಅಹವಾಲು ಸ್ವೀಕರಿಸದೇ ಎಸ್​ಐ‌ ರೇಣುಕಯ್ಯ ಮಹಿಳೆಯ ಮೇಲೆ ಕೈ ಮಾಡಿ, ಕುತ್ತಿಗೆ ಹಿಡಿದು ದರ್ಪ ಮೆರೆದಿದ್ದರು. ದಕ್ಷ ಅಧಿಕಾರಿ ಅಣ್ಣಾಮಲೈ ಸುಪರ್ದಿಯಲ್ಲಿರುವ ಠಾಣೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೆ ಎಚ್ಚೆತ್ತ ದಕ್ಷಿಣ ವಿಭಾಗ ಡಿಸಿಪಿ ಕೆ.ಅಣ್ಣಾಮಲೈ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಎಸ್​ಐ ರೇಣುಕಯ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

3 Replies to “ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ”

  1. ಸರ್ ಒಬ್ಬ ಮಹಿಳೆ ಮೇಲೆ ಈ ತರ ದಬ್ಬಾಳಿಕೆ ಮಾಡಿದ್ದು ತಪ್ಪು. ಒಪ್ಕೋತೀನಿ ಆದ್ರೆ ಎಷ್ಟೋ ಸಲ ನ್ಯಾಯ ಕೇಳಲು ಹೋದ ಗಂಡು ಮಕ್ಕಳನ್ನ ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ ಆ ಯಾವ ಪ್ರಕರಣಗಳು ಬೆಳಕಿಗೆ ಬರೋದಿಲ್ಲ. ಯಾಕೆ ee ತಾರತಮ್ಯ…?

  2. ಅಣ್ಣಾ ಮಲೈ ಅವರ ಅಧಿಕಾರವನ್ನು ಪ್ರಶ್ನಿನಿಸುವಂತಿಲ್ಲ ಅವರೊಬ್ಬ ಪ್ರಾಮಾಣಿಕ ಅಧಿಕಾರಿ,
    ಹಾಟ್ಸ್ ಆಪ್ ಟು ಯೂ ಸರ್

    ಅಷ್ಟೇ ಅಲ್ಲದೆ ಈಡಿ ದೇಶದಲ್ಲೇ ಏಕರೂಪದ ಕಾನೂನು ಸುವ್ಯವಸ್ಥೆ ಜಾರಿಗೆಯಗಬೇಕು ಯಾವುದೇ ಇಲಾಖೆಯಲ್ಲಾಗಲಿ ತಪ್ಪಿತಸ್ಥರಿಗೆ ಅಮಾನತು ಮಾಡುವ ಬದಲು ಸೇವೆಯಿಂದ ವಜಾಗೊಳಿಸುವದು ಉತ್ತಮವಾದ ಪರಿಹಾರ.ಅಮಾನತುಗೊಳಿಸುವುದು ಆ ವ್ಯಕ್ತಿಯನ್ನು ಮೋಜು ಮಸ್ತಿ ಮಾಡಲು ರಜೆ ಮೇಲೇ ಕಳಿಸಿದಂತಾಗುತ್ತದೆ,ಪುನಃ ಆ ವ್ಯಕ್ತಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಹೆಚ್ಚಿನ ತಪ್ಪುಗಳನ್ನು ಗಮನಕ್ಕೆ ಬರದಂತೆ ಮಾಡಲು ಶುರು ಮಾಡುತ್ತಾನೆ.
    ಹಿರಿಯ ಅಧಿಕಾರಿಗಳು,ಸಂವಿಧಾನದ ತಿದ್ದುಪಡಿ ಮಾಡಿ ಆದರ್ಶ ನ್ಯಾಯ ವ್ಯವಸ್ಥೆಯನ್ನು ಜಾರಿಗೆಗೊಳಿಸುವಲ್ಲಿ ಯಶಸ್ವಿಯಾಗಬೇಕು.
    ಇದು ನನ್ನೊಬ್ಬನ ಅಭಿಪ್ರಾಯವಲ್ಲ ದೇಶದ ಅನೇಕ ಜನಸಾಮಾನ್ಯರ ಧ್ವನಿಯಾಗಿದೆ.

Leave a Reply

Your email address will not be published. Required fields are marked *