ಎಸ್​ಐ ದೇಹದಾರ್ಢ್ಯಕ್ಕೆ ಡಿಸಿಪಿ ಅಣ್ಣಾಮಲೈ ಫಿದಾ

ಬೆಂಗಳೂರು: ಬನಶಂಕರಿ ಠಾಣೆ ಸಬ್​ಇನ್​ಸ್ಪೆಕ್ಟರ್ ಅರ್ಜುನ್ ದೇಹದಾರ್ಢ್ಯ ದಕ್ಷಿಣ ವಿಭಾಗ ಡಿಸಿಪಿ ಕೆ. ಅಣ್ಣಾಮಲೈ ಪ್ರಶಂಸೆಗೆ ಪಾತ್ರವಾಗಿದೆ.

ಪೊಲೀಸ್ ಕರ್ತವ್ಯದ ಜತೆಗೆ ವಿಶ್ರಾಂತಿ ಸಮಯದಲ್ಲಿ ಸ್ಥಳೀಯ ಜಿಮ್​ನಲ್ಲಿ ಅರ್ಜುನ್ ಕಸರತ್ತು ಮಾಡಿದ್ದಾರೆ. ಒತ್ತಡದ ಕೆಲಸದ ಜೊತೆಜೊತೆಯಲ್ಲಿ ತನ್ನ ದೇಹವನ್ನು ಬೆಳೆಸಿರುವ ಅರ್ಜುನ್ ಪ್ರತಿಯೊಬ್ಬ ಪೊಲೀಸರಿಗೂ ಮಾದರಿ ಎಂದು ಅಣ್ಣಾಮಲೈ ಹೇಳಿದ್ದಾರೆ.

ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ನನಗೆ 2014ರಲ್ಲಿ ಕಬಡ್ಡಿ ಆಡುವಾಗ ಕಾಲು ಮುರಿಯಿತು. ಇದರಿಂದ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಬಳಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಜಿಮ್​ಗೆ ಹೋಗುತ್ತಿದ್ದೆ. ಜಿಮ್​ನಲ್ಲಿ ಮಾಡುತ್ತಿರುವ ಕಸರತ್ತನ್ನು ತಿಳಿದು ಇತ್ತೀಚೆಗೆ ಅಣ್ಣಾಮಲೈ ಪ್ರೋತ್ಸಾಹಿಸಿದರು. ಅವರ ಉತ್ತೇಜನದಿಂದ ಇದು ಸಾಧ್ಯವಾಗಿದೆ ಎಂದು ಅರ್ಜುನ್​ವಿಜಯವಾಣಿಗೆ ತಿಳಿಸಿದ್ದಾರೆ.

One Reply to “ಎಸ್​ಐ ದೇಹದಾರ್ಢ್ಯಕ್ಕೆ ಡಿಸಿಪಿ ಅಣ್ಣಾಮಲೈ ಫಿದಾ”

  1. ಭಲೇ ಕರ್ನಾಟಕ ಆರಕ್ಷಕರೆ, ನಮ್ಮ ಯುವ ಜನತೆಗೆ ಮಾದರಿಯಾಗಿದ್ದೀರ. – ಗುಂಜ್ಮ೦ಜ (GUNJMNAJA)

Leave a Reply

Your email address will not be published. Required fields are marked *