ಖಡಕ್​ ಡಿಸಿಪಿ ವಿರುದ್ಧ ನಟಿ ಜಯಪ್ರದಾ ಗರಂ ಆಗಿದ್ದೇಕೆ?

ಬೆಂಗಳೂರು: ರೆಬೆಲ್​ ಸ್ಟಾರ್​ ಅಂಬರೀಷ್ ಅಂತ್ಯಕ್ರಿಯೆ ವೇಳೆ ಮಾಜಿ ಸಂಸದೆಯೊಬ್ಬರಿಗೆ ಸೂಕ್ತ ಭದ್ರತೆ ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದೆ ಹಾಗೂ ಹಿರಿಯ ನಟಿ ಜಯಪ್ರದಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್​ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಹೊರ ಹೋಗುವ ವೇಳೆ, “ಅವರು ಡಿಸಿಪಿಯಾದರೆ ನಾನು ಮಾಜಿ ಸಂಸದೆ. ಎಲ್ಲದಕ್ಕೂ ಹೆಚ್ಚಾಗಿ ನಾನೊಬ್ಬ ಮಹಿಳೆ. ನನಗೆ ಬೆರಳು ತೋರಿಸಿ ಮಾತನಾಡಿದ್ದಾರೆ. ಭದ್ರತೆ ನೀಡುವುದು ಪೊಲೀಸರ ಕರ್ತವ್ಯ” ಎಂದು ಕಿಡಿ ಕಾರಿದರು.

ಆಗಿದ್ದೇನು?
ಪರಿಚಯಸ್ಥರೊಬ್ಬರಿಗಾಗಿ ಜಯಪ್ರದಾ ಅವರು ಗೇಟ್​ ಬಳಿ ಕಾಯುತ್ತಿರುವುದನ್ನು ಕಂಡ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಭದ್ರತಾ ದೃಷ್ಟಿಯಿಂದ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಜಯಪ್ರದಾ ಅವರು, ಪೊಲೀಸರು ಭದ್ರತೆ ನೀಡುವುದರ ಬದಲು ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಸನ್ನೆ ಮಾಡುತ್ತಾರೆ ಎಂದು ಕೋಪಗೊಂಡು ಆಕ್ರೋಷ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)