More

    ಡಿಸಿಎಂ ಹುದ್ದೆ, ಮೀಸಲು ಹೆಚ್ಚಳಕ್ಕೆ ಮನವಿ; ವಾಲ್ಮೀಕಿ ಸಮುದಾಯದ ನಿಯೋಗದಿಂದ ಸಿಎಂ ಬಿಎಸ್​ವೈ ಭೇಟಿ

    ಬೆಂಗಳೂರು: ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇ.7.5 ಮೀಸಲಾತಿ ಕೊಡಬೇಕು. ನಾಗಮೋಹನ್ ದಾಸ್ ಸಮಿತಿ ಆದಷ್ಟು ಬೇಗ ವರದಿ ನೀಡುವಂತೆ ಸೂಚಿಸಬೇಕು ಎಂದು ವಾಲ್ಮೀಕಿ ಸಮಾಜದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಸನ್ನನಾಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಸಮುದಾಯದ ನಾಯಕರು, ಸಭೆ ಆರಂಭದಲ್ಲೇ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪವಿಟ್ಟಿದ್ದಲ್ಲದೆ ಸಮುದಾಯ ಮೀಸಲಾತಿಗೆ ಅರ್ಹವಾಗಿದೆ. ಆದರೂ ಮೀಸಲಾತಿ ನೀಡಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೊದಲು ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

    ಸಿಎಂ ಭರವಸೆ: ನಾಗಮೋಹನ್​ದಾಸ್ ಸಮಿತಿ ಬೇಡಿಕೆಗೆ ಅನುಗುಣವಾಗಿ 6 ತಿಂಗಳ ಸಮಯ ಕೊಟ್ಟಿದ್ದೇವೆ. ಎಲ್ಲ ಇಲಾಖೆಗಳಿಗೆ ಆಯೋಗ ಕೇಳಿದ ಮಾಹಿತಿ ಮತ್ತು ಡೇಟಾ ಕೊಡಲು ಆದೇಶಿಸಲಾಗುವುದು. ಬೇಗ ವರದಿ ಕೊಟ್ಟರೆ, ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಬಿಎಸ್​ವೈ ಭರವಸೆ ನೀಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಜೆ.ಎನ್.ಗಣೇಶ್. ರಾಜುಗೌಡ, ಸಂಸದ ದೇವೇಂದ್ರಪ್ಪ ಉಪಸ್ಥಿತರಿದ್ದರು.

    ರಮೇಶ್ ಕೈ ಕುಲುಕಿದ ಶ್ರೀರಾಮುಲು

    ರಮೇಶ್ ಜಾರಕಿಹೊಳಿ ಬರುತ್ತಿದ್ದಂತೆ ಕೃಷ್ಣಾದಲ್ಲಿ ನಿಂತು ಸ್ವಾಗತ ಕೋರಿ, ನಂತರ ಅವರನ್ನು ಕಚೇರಿ ಒಳಗೆ ಕಳುಹಿಸಿಕೊಡುವ ಮೂಲಕ ಸಚಿವ ಶ್ರೀರಾಮುಲು ಗಮನ ಸೆಳೆದರು. ಹಿಂದೆ ಮೈತ್ರಿ ಸರ್ಕಾರವಿದ್ದಾಗ ಮೀಸಲಾತಿ ಕುರಿತು ಸಭೆಗೆ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ ಗೈರಾಗಿದ್ದರು. ಸಭೆ ಆರಂಭಕ್ಕೂ ಮುನ್ನ ಕೃಷ್ಣಗೆ ಬಂದು ಹಾಜರಾತಿ ತೋರಿಸಿದ ಶಾಸಕ ತುಕರಾಮ್ ಬಳಿಕ ಹೊರಟು ಹೋದರು.

    ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡಿ ಎನ್ನೋದು ನಮ್ಮ ಬೇಡಿಕೆ. ಆದರೆ ಇಂದಿನ ಸಭೆಯಲ್ಲಿ ಅದು ಚರ್ಚೆ ಆಗಿಲ್ಲ. ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಡಿಸಿಎಂ ಹುದ್ದೆಗೆ ಅರ್ಹರಿದ್ದಾರೆ.

    | ಶ್ರೀ ಪ್ರಸನ್ನಾನಂದ ಸ್ವಾಮೀಜಿ ವಾಲ್ಮೀಕಿ ಗುರುಪೀಠ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts