ಬೆಂಬಲ ವಾಪಸ್​ ಪಡೆದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಡಿಸಿಎಂ ಪರಂ

ಬೆಂಗಳೂರು: ನಮಗೆ ನೀಡಿದ್ದ ಬೆಂಬಲ ವಾಪಸ್​ ಪಡೆದರೂ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷೇತರ ಶಾಸಕರಾಗಿದ್ದ ನಾಗೇಶ್​ ಮತ್ತು ಆರ್.ಶಂಕರ್​ ಮೈತ್ರಿ ಸರ್ಕಾರದಿಂದ ಬೆಂಬಲ ವಾಪಸ್​ ಪಡೆದಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

“ಬಿಜೆಪಿಯವರು ನಮ್ಮ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡುತ್ತಿದ್ದಾರೆ ಎಂದು ನಾವು ಮುಂಚಿನಿಂದಲೇ ಹೇಳುತ್ತಿದ್ದೇವೆ. ಅವರು ಸಮ್ಮಿಶ್ರ ಸರ್ಕಾರನ್ನು ಕೆಡವುವ ಪ್ರಯತ್ನ ವಿಫಲವಾಗುತ್ತದೆ. ನಮ್ಮ ಸರ್ಕಾರ ಸ್ಥಿರವಾಗಿದೆ” ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)