ಬಿಎಸ್​ವೈ, ಬಿಜೆಪಿಗೆ ಭಾರಿ ಮುಖಭಂಗವಾಗಿದೆ: ಡಿಸಿಎಂ ಜಿ.ಪರಮೇಶ್ವರ್

ತುಮಕೂರು: ಬಿಜೆಪಿ ಮುಖಂಡರು ಚಂದ್ರಶೇಖರ್ ಪರ ಪ್ರಚಾರ ಮಾಡಿಲ್ಲ. ಹಾಗಾಗಿ ಸ್ವಾಭಾವಿಕವಾಗಿ ಅವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರಾಮನಗರ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್​.ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರಶೇಖರ್​ ಅವರನ್ನು ಒತ್ತಾಯಪೂರ್ವಕವಾಗಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದರು ಎಂದರು.

ಮೈತ್ರಿ ಸರ್ಕಾರಕ್ಕೆ ಜಯ
ಚಿಕ್ಕಮಗಳೂರು: ರಾಮನಗರದ ಬಿಜೆಪಿ ಅಭ್ಯರ್ಥಿಯ ಮೂಲ ಕಾಂಗ್ರೆಸ್ ಆಗಿತ್ತು. ಬಹುಶಃ ಬಿಜೆಪಿ ಅನುಭವ ಸಾಕಾಗಿ ಕಾಂಗ್ರೆಸ್​ಗೆ ವಾಪಸ್ಸು ಬಂದಿರಬಹುದು. ಮೈತ್ರಿ ಸರ್ಕಾರಕ್ಕೆ ಜಯ ಬಂದೇ ಬರುತ್ತದೆ. ಬಿಜೆಪಿ ಅವರಿಗೆ ಕೆಲವು ಜಾಗದಲ್ಲಿ ಅಭ್ಯರ್ಥಿಗಳೇ ಇಲ್ಲ. ಸರ್ಕಾರಿ ‌ಕೆಲಸದಲ್ಲಿ ಇದ್ದವರನ್ನ ಮಂಡ್ಯ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಯಾವ ರಾಜಕೀಯ ಪಕ್ಷ ಸಿದ್ಧಾಂತ, ಧ್ಯೇಯ ಮರೆಯುತ್ತದೋ ಆ ಪಕ್ಷಕ್ಕೆ ರಾಮನಗರದ ಸ್ಥಿತಿ ಬರುತ್ತದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.