ಸಿದ್ಧಗಂಗಾ ಶ್ರೀಗಳ ಭೇಟಿಯಾದ ಡಿಸಿಎಂ

ತುಮಕೂರು: ಚೆನ್ನೈನ ಡಾ.ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಡಿಸಿಎಂ ಡಾ.ಜಿ.ಪರಮೇಶ್ವರ್ ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಜ್ವರದಿಂದಾಗಿ ಬೆಳಗಾವಿ ಅಧಿವೇಶನದ ಮೊದಲ ದಿನ ಗೈರಾಗಿದ್ದ ಪರಮೇಶ್ವರ್ ವಿಶೇಷ ವಿಮಾನದಲ್ಲಿ ಚೆನ್ನೈಗೆ ಸಂಜೆ 4ಕ್ಕೆ ತೆರಳಿ ಶ್ರೀಗಳನ್ನು ಕಂಡು ಯೋಗಕ್ಷೇಮ ವಿಚಾರಿಸಿದರು. ಶ್ರೀಗಳ ಆರೋಗ್ಯದ ಬಗ್ಗೆ ಡಾ. ರೇಲಾ ಜತೆ ಪರಮೇಶ್ವರ್ 25 ನಿಮಿಷಕ್ಕೂ ಹೆಚ್ಚು ಕಾಲ ಚರ್ಚಿಸಿ, ಬೆಂಗಳೂರಿಗೆ ಮರಳಿದರು.

ವಾರ್ಡ್​ಗೆ ಬುಧವಾರ ಶಿಫ್ಟ್: ಶಸ್ತ್ರಚಿಕಿತ್ಸೆ ಬಳಿಕ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು ಬುಧವಾರ ಅವರನ್ನು ವಾರ್ಡ್​ಗೆ ಸ್ಥಳಾಂತರಿಸುವುದಾಗಿ ಶ್ರೀಗಳ ಆರೋಗ್ಯದ ಉಸ್ತುವಾರಿ ಹೊತ್ತಿರುವ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ. ಪರಮೇಶ್ ತಿಳಿಸಿದರು. ಶ್ರೀಗಳು ಪೂರ್ಣ ಗುಣಮುಖರಾದ ಬಳಿಕವಷ್ಟೇ ಮಠಕ್ಕೆ ಕರೆತರಲಾಗುವುದು ಎಂದರು.

‘ಧರ್ಮ’ ಗೊಂದಲಕ್ಕೆ ತೆರೆ: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಣೆಗೆ ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್, ವೈದ್ಯರ ಧರ್ಮ ಬೇರೆ ಇದ್ದರೂ ಶ್ಲಾಘನೀಯವಾಗಿ ಸೇವೆ ನೀಡುತ್ತಿದ್ದಾರೆಂದಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸೋಮವಾರ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಬೇರೆ ಅರ್ಥದಲ್ಲಿ ಹೇಳಿಲ್ಲ. ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುವೆ ಎಂದಿದ್ದಾರೆ. ಈ ಬಗ್ಗೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನುವ ಭೇದಭಾವ ಏಕೆ ತರಬೇಕು? ವೈದ್ಯರು ದೇವರಿಗೆ ಸಮಾನ ಎನ್ನುತ್ತಾರೆಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *