ಖಾತೆ ಬಿಟ್ಟು ಕೊಡುವುದಕ್ಕೆ ನನಗೆ ತಕರಾರಿಲ್ಲ: ಡಿಸಿಎಂ ಪರಂ

ಬೆಂಗಳೂರು: ಖಾತೆ ವಿಚಾರದಲ್ಲಿ ನನಗೆ ಯಾವುದೇ ಅಸಮಧಾನವಿಲ್ಲ. ಖಾತೆ ಬಿಟ್ಟು ಕೊಡುವುದಕ್ಕೆ ತಕರಾರೂ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ಯಾವುದೇ ನಡುವೆ ಗಲಾಟೆಯಾಗಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಇಂದು ಸಂಜೆ ವೇಳೆಗೆ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎಂದರು.

ಸರ್ಕಾರ ಬೀಳಲಿದೆ ಎಂಬ ಉಮೇಶ್ ಕತ್ತಿ‌ ಹೇಳಿಕೆಗೆ ಪ್ರತಿಕ್ರಿಯಿಸಿ, 24 ಗಂಟೆ ಅಂತಾ ಹೇಳಿದ್ದಾರೆ ನಂತರ ನೀವೆ ಹೇಳುತ್ತೀರಾ ಏನಾಯಿತು ಅಂತ. ನಮ್ಮ ಶಾಸಕರು ಎಲ್ಲೂ ಹೋಗಲ್ಲ. ರಮೇಶ್ ಜಾರಕಿಹೊಳಿ ‌ಅಸಮಧಾನ‌ ಸರಿಹೋಗಿದೆ ಎಂದರು. (ದಿಗ್ವಿಜಯ ನ್ಯೂಸ್)