ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ವಿಜಯವಾಣಿ ಸುದ್ದಿಜಾಲ ಸವಣೂರ

ಸವಣೂರ, ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳ ಕೆರೆಗಳ ಅಭಿವೃದ್ಧಿ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸವಣೂರಲ್ಲಿ ಹಮ್ಮಿಕೊಂಡಿರುವ ನಿರಂತರ ಧರಣಿ ಶುಕ್ರವಾರ 23ದಿನ ಪೂರೈಸಿತು.

ಸ್ಥಳಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಭೇಟಿ ನೀಡಿ ರೈತ ಸಂಘದ ಪದಾಧಿಕಾರಿಗಳೊಂದಿಗೆ ರ್ಚಚಿಸಿ, ಮನವಿ ಸ್ವೀಕರಿಸಿದರು.

ರೈತ ಸಂಘದ ಹೋರಾಟದ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಅಂತರ್ಜಲಮಟ್ಟ ಹೆಚ್ಚಳ ಹಾಗೂ ಡ್ಯಾಂ ನಿರ್ವಣದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

ಧರಣಿ ನೇತೃತ್ವ ವಹಿಸಿರುವ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ರ್ಬಾ, ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್, ತಹಸೀಲ್ದಾರ್ ವಿ.ಡಿ. ಸಜ್ಜನ್, ರೈತ ಸಂಘದ ಪದಾಧಿಕಾರಿಗಳಾದ ರಾಮಣ್ಣ ಅಗಸರ, ಬಾಬನಸಾಬ್ ರಾಯಚೂರ, ಪಾಂಡಪ್ಪ ತಿಪ್ಪಕ್ಕನವರ, ಶಿವಾಜಿ ಮಾದಾಪೂರ, ಹೊನ್ನಪ್ಪ ಮರೆಮ್ಮನವರ, ನಾಗೇಶ ದೊಡ್ಡಮನಿ, ಇತರರು ಪಾಲ್ಗೊಂಡಿದ್ದರು.

ಅಭಿಯಾನಕ್ಕೆ ಬೆಂಬಲ: ಸವಣೂರ: ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಸಂಘದ ಹಮ್ಮಿಕೊಂಡಿರುವ ನೇತ್ರದಾನ ವಾಗ್ದಾನ ಪತ್ರ ಸಹಿ ಅಭಿಯಾನ ಬೆಂಬಲಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ‘ಅಂದರ ಬಾಳಿಗೆ ಬೆಳಕಾಗಲು ಮರಣಾ ನಂತರ ನೇತ್ರದಾನ ಹಾಗೂ ಈ ಕುರಿತು ಪ್ರೇರಣಾ ಕಾರ್ಯಕ್ರಮ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸವಣೂರ ಮಾಧ್ಯಮ ಮಿತ್ರರು ಮುಂದಾಗಿರುವುದು ಶ್ಲಾಘನೀಯ ಕಾರ್ಯ’ ಎಂದರು.

ವರದಿಗಾರ ಆನಂದ ಮತ್ತಿಗಟ್ಟಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ, ಪ್ರಭಾರ ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್ ಸಹಿ ಹಾಕಿದರು. ಪತ್ರಕರ್ತರಾದ ಶಂಕ್ರಯ್ಯ ಹಿರೇಮಠ, ಅಶೋಕ ಕಳಲಕೊಂಡ, ಯೋಗೇಂದ್ರ ಜಂಬಗಿ, ರಾಜಶೇಖರಯ್ಯ ಗುರುಸ್ವಾಮಿಮಠ, ಗಣೇಶಗೌಡ ಪಾಟೀಲ, ಅಶೋಕ ಕಾಳಶೆಟ್ಟಿ, ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *