More

  ಮಹಾರಾಷ್ಟ್ರ ದ‌ ಮೂವರು ಸಚಿವರಿಗೆ, ಒಬ್ಬ ಸಂಸದನಿಗೆ ಜಿಲ್ಲಾ‌ಪ್ರವೇಶ ನಿರ್ಬಂಧ


  ಬೆಳಗಾವಿ:ರಾಜ್ಯೋತ್ಸವ ದಿನದಂದು‌ ಮಹಾರಾಷ್ಟ್ರ ದ ಸರ್ಕಾರದ ಮೂವರು ಸಚಿವರು ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಮಹಾನಗರ ಮತ್ತು ಜಿಲ್ಲೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.
  ನವಂಬರ್ 1 ಕರ್ನಾಟಕ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಏಕೀಕರ ಸಮಿತಿಯು ಕರಾಳ ದಿನ ಆಚರಿಸುವ ಬಗ್ಗೆ ತಿಳಿದು ಬಂದಿದೆ. ಅಲ್ಲದೆ ಅಂದು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ರ್ಯಾಲಿ ನಡೆಸಿ ಮರಾಠಾ ಮಂದಿರದಲ್ಲಿ ಸಭೆ ನಡೆಸಲಿದ್ದಾರೆ.‌ಈ ಸಭೆಗೆ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ‌ಕೇಸರಕರ ಹಾಗೂ ಸಂಸದ  ಧೈರ್ಯಶೀಲ ಮಾನೆ ಅವರು ಭಾಗವಹಿಸಿ ಪ್ರಚೋದನಕಾರಿ ಭಾಷಣ‌ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಜಿಲ್ಲಾ‌ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts