More

    ಮಳೆ ಹಾನಿ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ತಾಕೀತು


    ಚಿತ್ರದುರ್ಗ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಸಕ್ತ ಮುಂಗಾರು ಮಳೆ,ಚಂಡ ಮಾರುತಗಳ ದುಷ್ಪರಿಣಾಮ ನಿಯಂತ್ರಿಸಲು ಕೈ ಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಲಹೆ,ಸೂಚನೆಗಳನ್ನು ನೀಡಿದೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದ್ದಾರೆ. ಈ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಅವರು, ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಆಗಬಹುದಾದ ಹಾನಿ ತಗ್ಗಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
    ಜಿಲ್ಲಾ,ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು. ಗುಡುಗು,ಮತ್ತು ಸಿಡಿಲಿನ ಪ್ರತಿಕೂಲ ಪರಿಣಾಮ ತಗ್ಗಿಸಲು ಕಾರ್ಯೋನ್ಮುಖರಾಗ ಬೇಕು. ವಾಡಿಕೆ ಮಳೆಯೊಂದಿಗೆ ರಾಜ್ಯದ ಹಲವು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮುಂಗಾರು ಆರಂಭ ಮುನ್ನವೇ ವಿಪತ್ತುಗಳಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ,ಸಮುದಾಯ ಗಳಲ್ಲಿ ಅರಿವು ಮೂಡಿಸಬೇಕು.
    ವಿಪತ್ತು ನಿರ್ವಹಣಾ ಕೇಂದ್ರಗಳು 24/7 ಕಾರ್ಯನಿರ್ವಹಿಸ ಬೇಕು. ಅಧಿಕಾರಿಗಳ ವಿಳಾಸ,ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸ ಬೇಕು. ವಾಟ್ಸ್ ಆಫ್ ಗ್ರೂಪ್ ರಚಿಸಬೇಕು. ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯವಾಗಬಾರದು. ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಗಳ ಮತ್ತು ಸ್ವಯಂ ಸೇವಕರು ಸದಾ ಸನ್ನದಾಗಿರುವಂತೆ ನೋಡಿಕೊಳ್ಳ ಬೇಕೆಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿರುವ ಡಿಸಿ,ಪ್ರಕೃತಿ ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸಿ ಆಶ್ರಯ ಒದಗಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.


    ಸಹಾಯವಾಣಿ
    ಹವಾಮಾನ ಇಲಾಖೆ ಮುನ್ಸೂಚನೆ,ಮುನ್ನೆಚರಿಕೆಗಳನ್ನು ಸಾರ್ವಜನಿಕರ ಮೊಬೈಲ್‌ಗಳಿಗೆ ರವಾನೆಯಾಗಲಿದೆ. ವರುಣ ಮಿತ್ರ ಸಹಾಯವಾಣಿ 9243345433 ಮೂಲಕ ಸಾರ್ವಜನಿಕರು ಅಗತ್ಯ ಮಾಹಿತಿ ಪಡೆಯಬಹುದು. ಖಜಿಜ್ಝ್ಠಿ ,ಈಞಜ್ಞಿಜಿ ಮಿತ್ರ ಹಾಗೂ ಖಚ್ಚಠಿ ಮಿತ್ರ ಸಹಾಯವಾಣಿ ಅರ್ಧ ತಾಸು ಮೊದಲೇ ಮಳೆ ಮುನ್ಸೂಚನೆ ಪಡೆಯಬಹುದೆಂದು ಡಿಸಿ ತಿಳಿಸಿದ್ದಾರೆ.


    ಒತ್ತುವರಿ ತೆರವಿಗೆ ಸೂಚನೆ
    ನದಿ,ಹಳ್ಳ,ಕೆರೆ,ನಾಲೆಗಳ ಒತ್ತುವರಿ ತೆರವು ಮಾಡಿ ಮಳೆಗಾಲ ಆರಂಭಕ್ಕೆ ಮುಂಚಿತವಾಗಿಯೇ ಹೂಳು ತೆಗೆದು ಸ್ವಚ್ಛಗೊಳಿಸಲಾಗುವು ದು. ಮನೆಗಳಿಗೆ ನೀರು ನುಗ್ಗದಂತೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಪ್ರವಾಹ ಬಂದು ನಿಂತ ನೀ ರನ್ನು ಹೊರಹಾಕಲು ಪಂಪಸೆಟ್‌ಗಳನ್ನು ಸಜ್ಜುಗೊಳಿಸಲಾಗುವುದು. ವಿದ್ಯುತ್, ಆರೋಗ್ಯ ಸೇವೆಗಳಲ್ಲಿ ವ್ಯತ್ಯಯವಾಗದೆಂದು ಸಾರ್ವಜನಿಕರಿಗೆ ಡಿಸಿ ಭರವಸೆ ನೀಡಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts