ಡೆಲ್ಲಿ ಬೌಲಿಂಗ್ ಕೋಚ್ ಮುನಾಫ್ ಪಟೇಲ್​ಗೆ ದಂಡ: ಹಾಲಿ ಆವೃತ್ತಿಯಲ್ಲಿ ಮೊದಲ ದೃಷ್ಟಾಂತ

blank

ನವದೆಹಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದ ವೇಳೆ ಐಪಿಎಲ್ ನೀತಿಸಂಹಿತೆ ಉಲ್ಲಂಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಮುನಾಫ್ ಪಟೇಲ್‌ಗೆ ಬಿಸಿಸಿಐ ದಂಡದ ಶಿಕ್ಷೆ ಜತೆಗೆ ಒಂದು ಡಿಮೆರಿಟ್ ಅಂಕ ನೀಡಿದೆ. ಭಾರತ ತಂಡದ ಮಾಜಿ ವೇಗಿ ಮುನಾಫ್ ಪಟೇಲ್ ಐಪಿಎಲ್ ನಿಯಮಾವಳಿಯಲ್ಲಿ 1 ಲೆವೆಲ್‌ನ ಆರ್ಟಿಕಪ್ 2.20 ನಿಯಮ ಉಲ್ಲಂಸಿದ್ದು, ಪಂದ್ಯದ ಸಂಭಾವನೆಯ ಶೇ.25 ದಂಡ ಶಿಕ್ಷೆ ವಿಧಿಸಲಾಗಿದೆ. ಮುನಾಫ್ ಎಸಗಿರುವ ತಪ್ಪನ್ನು ಉಲ್ಲೇಖಿಸದ ಬಿಸಿಸಿಐ, ಅವರು ಮ್ಯಾಚ್ ರೆಫ್ರಿ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ.

ಮುನಾಫ್ ಪಟೇಲ್ ಪಂದ್ಯದ ವೇಳೆ ಡಗೌಟ್ ಬಳಿ ನಾಲ್ಕನೇ ಅಂಪೈರ್ ಬಳಿ ಆಕ್ರೋಶಭರಿತವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇದೇ ಅವರು ಶಿಕ್ಷೆಗೆ ಗುರಿಯಾಗಲು ಕಾರಣ ಎನ್ನಲಾಗಿದೆ. ಪಂದ್ಯದ ವೇಳೆ ಪದೇಪದೆ ಬದಲಿ ಫೀಲ್ಡರ್‌ನೊಂದಿಗೆ ತಂಡಕ್ಕೆ ಟಿಪ್ಸ್ ನೀಡಲು ಪ್ರಯತ್ನಿಸಿದ್ದು, ಇದಕ್ಕೆ 4ನೇ ಅಂಫೈರ್ ತಡೆಯೊಡ್ಡಿದ್ದರು ಎನ್ನಲಾಗಿದೆ. ಹಾಲಿ ಆವೃತ್ತಿಯಲ್ಲಿ ತರಬೇತಿ ಬಳಗದ ಸದಸ್ಯರಿಗೆ ದಂಡ ವಿಧಿಸಿದ ಮೊದಲ ದೃಷ್ಟಾಂತ ಇದಾಗಿದೆ.

Share This Article

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…