ಸಿನಿಮಾ

ಮುತ್ಯಾಲಮ್ಮದೇವಿ ರಥೋತ್ಸವ ಅದ್ದೂರಿ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದಲ್ಲಿ ಮಂಗಳವಾರ ಗ್ರಾಮದೇವತೆ ಮುತ್ಯಾಲಮ್ಮದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ದೇವಿಗೆ ವಿವಿಧ ಧಾರ್ಮಿಕ ಪೂಜೆ ಹಾಗೂ ಪುಷ್ಪಾಲಂಕಾರ ಮಾಡಲಾಗಿತ್ತು.
ಬೆಳಗ್ಗೆ 11.30ಕ್ಕೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ವೀರಗಾಸೆ ಕಲಾ ತಂಡಗಳು ಮೆರುಗು ನೀಡಿದ್ದವು.
ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ ಸೇರಿ ನಗರ ಹಾಗೂ ತಾಲೂಕಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿ ಆರತಿ ಬೆಳಗಿದರು.
ಮುತ್ಯಾಲಮ್ಮ ದೇಗುಲದ ಸಮೀಪವಿರುವ ನವಗ್ರಹ ದೇವಾಲಯ ಹಾಗೂ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿಸಲಾಯಿತು. ಮೇ.24ರಂದು ಹಗಲು ಪರಿಷೆ ನಡೆಯಲಿದೆ.

ಶಾಸಕ ಧೀರಜ್ ಮುನಿರಾಜು ಪೂಜೆ ಸಲ್ಲಿಸಿ ಮಾತನಾಡಿ, ದೇವತಾ ಕಾರ್ಯಗಳಿಂದ ನೆಮ್ಮದಿ ಸಿಗುತ್ತದೆ. ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯಗಳು ಇಂದಿಗೂ ಮುಂದುವರೆಯುತ್ತಿರುವುದು ಉತ್ತಮ ಬೆಳವಣಿಗೆ. ನಾಡಿಗೆ ಪ್ರಕೃತಿ ವಿಕೋಪದಿಂದ ಯಾವುದೇ ಅನಾಹುತಗಳು ಎದುರಾಗದಿರಲಿ, ಎಲ್ಲರಿಗೂ ಕ್ಷೇಮ ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದರು.

Latest Posts

ಲೈಫ್‌ಸ್ಟೈಲ್