More

    ಹಗಲು ದರೋಡೆಗಿಳಿದ ಖಾಸಗಿ ಶಾಲೆಗಳು: ಕೊಪ್ಪಳದಲ್ಲಿ ಎಸ್‌ಎಫ್‌ಐ ಆರೋಪ

    ಕೊಪ್ಪಳ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಕೆಲ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದು ಮನಬಂದಂತೆ ಡೊನೇಷನ್ ಪಡೆಯುತ್ತಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಎಫ್‌ಐ ಸಂಚಾಲಕರು ಶುಕ್ರವಾರ ಡಿಡಿಪಿಐ ಎಂ.ಎ.ರಡ್ಡೇರ್‌ಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ, ಕಡಿವಾಣಕ್ಕೆ ಮನವಿ

    1983 ಶಿಕ್ಷಣ ಕಾಯ್ದೆ ಮತ್ತು 2009 ಆರ್‌ಟಿಇ ಕಾಯ್ದೆ ಉಲ್ಲಂಘನೆ


    ಜಿಲ್ಲಾ ಶಿಕ್ಷಣ ಪ್ರಾಧಿಕಾರ, ಶಾಸಗಿ ಶಾಲೆಗಳಿಗೆ ನಿಯಮಾನುಸಾರ ಶುಲ್ಕ ಪಡೆಯುವ ಬಗ್ಗೆ ಸೂಚಿಸಬೇಕು. ಪಾಲಕರಿಗೆ ಡೊನೇಷನ್ ಹಾವಳಿ ಕುರಿತು ಮಾಹಿತಿ ನೀಡಬೇಕು. ಆದರೆ, ಈವರೆಗೂ ಸಭೆ ನಡೆಸಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 1983 ಶಿಕ್ಷಣ ಕಾಯ್ದೆ ಮತ್ತು 2009 ಆರ್‌ಟಿಇ ಕಾಯ್ದೆ ಉಲ್ಲಂಘಿಸಲಾಗುತ್ತಿದೆ. ಖಾಸಗಿ ಶಾಲೆಗಳು ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದಿವೆ.

    ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ಶಾಲೆಗಳು ಹೆಚ್ಚುವರಿ ಡೊನೇಷನ್ ಪಡೆಯುತ್ತಿವೆ. ಇದರಿಂದ ಬಡ, ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸ ದುಬಾರಿಯಾಗುತ್ತಿದೆ. 500-600ರೂ. ಶಾಲಾಭಿವೃದ್ಧಿ ಶುಲ್ಕ ಪಡೆಯಬೇಕು. ಪ್ರವೇಶಾತಿಗೆ ಪರೀಕ್ಷೆ ನಡೆಸುವಂತಿಲ್ಲ. ಶುಲ್ಕ ಇನ್ನಿತರ ಮಾಹಿತಿಯನ್ನು ದೊಡ್ಡದಾಗಿ ಪ್ರದರ್ಶಿಸಬೇಕು. ಇದ್ಯಾವುದನ್ನು ಜಿಲ್ಲೆಯ ಖಾಸಗಿ ಶಾಲೆಗಳು ಮಾಡುತ್ತಿಲ್ಲವೆಂದು ದೂರಿದರು.

    ಡೊನೇಷನ್ ಹಾವಳಿ ತಡೆಯಬೇಕು

    ಕೂಡಲೇ ಡಿಸಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಡೊನೇಷನ್ ಹಾವಳಿ ತಡೆಯಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸಿದ ಶಾಲೆಗಳ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ, ಸಂಚಾಲಕರಾದ ಅಮರಯ್ಯ, ಧರ್ಮಪ್ಪ, ಪರಶುರಾಮ, ಅಮರೇಶ, ಕೃಷ್ಣ, ಸುಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts