ಧ್ವನಿ ನಿಯಂತ್ರಿತ ಉಪಕರಣ ಅನ್ವೇಷಣೆ

| ಕಿರಣ್ ಮಾದರಹಳ್ಳಿ, 

ಬೆಂಗಳೂರು: ಅಂಗವಿಕಲರು, ಅಂಧರು, ವೃದ್ಧರಿಗೆ ಸಿಹಿ ಸುದ್ದಿ. ಕುಳಿತ ಸ್ಥಳದಿಂದಲೇ ಮನೆಯ ಉಪಕರಣಗಳನ್ನು ನಿಯಂತ್ರಿಸುವ ಸಾಧನವೊಂದು ಇದೀಗ ಸಿದ್ಧವಾಗಿದೆ!

ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿ ಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಸುಂದರ್ ಮತ್ತು ಕೃತಿ ಚಂದ್ರಶೇಖರ್ ‘ವಾಯ್್ಸ ಅಸಿಸ್ಟೆಡ್ ಹೋಮ್ ಆಟೋ ಮೆಷನ್ ಯೂಜಿಂಗ್ ಗೂಗಲ್ ಅಸಿಸ್ಟೆಂಟ್’ (ವಿಎಎಚ್​ಎಯುಜಿಎ) ಸಾಧನ ಅಭಿವೃದ್ಧಿಪಡಿಸಿದ್ದಾರೆ.

ಇದು ಕೋಡಿಂಗ್ ವಿಧಾನದಲ್ಲಿ ಉಪಕರಣಗಳನ್ನು ನಿಯಂತ್ರಿಸುವ ಧ್ವನಿ ಆಧಾರಿತ ಕಾರ್ಯ ನಿರ್ವಾಹಕ ಸಾಧನವಾಗಿದೆ. ಕೋ ಆಪ್ಟಿಂಗ್ ಡಿವೈಸ್, ಮೈಕ್ರೋ ಕಂಟ್ರೋಲ್ ಇದಕ್ಕೆ ನೆರವಾ ಗಲಿದೆ. ಇಂಟರ್​ನೆಟ್​ಗೂಗಲ್ ಸಂಪರ್ಕದಿಂದ ಸರಳವಾಗಿ ಆಜ್ಞೆಗಳನ್ನು ನೀಡಬಹುದಾಗಿದೆ. ಇಂದಿನ ಆಧುನಿಕ ಶೈಲಿಯ, ಅತ್ಯಾಧುನಿಕ ಸೌಲಭ್ಯಗಳನ್ನೊಳ ಗೊಂಡ ಸ್ಮಾರ್ಟ್ ಹೋಂಗಳಲ್ಲಿ ರಿಮೋಟ್ ಅಥವಾ ವಾಯ್್ಸ ಕಂಟ್ರೋಲರ್ ಅಳವಡಿಸಿ ಕುಳಿತಲ್ಲಿಯೇ ಮನೆಯ ಸಲಕರಣೆ ಗಳನ್ನು ನಿಯಂತ್ರಿಸುವಂತೆ ವಿಎಎಚ್​ಎಯುಜಿಎ ಕೆಲಸ ಮಾಡಲಿದೆ. ನಡೆದಾಡಲಾಗದ, ಲೈಟ್, ಫ್ಯಾನ್ ಇತರೆ ಎಲೆಕ್ಟ್ರಿಕ್ ಸ್ವಿಚ್​ಗಳು ಕೈಗೆಟುಕದೆ ಪರದಾಡುವವರು ಈ ಸಾಧನದ ಮೂಲಕ ಕುಳಿತ ಸ್ಥಳದಿಂದ ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ಮೊಬೈಲ್ ಆಪ್

ವಿಎಎಚ್​ಎಯುಜಿಎ ಸಾಧನ ಬಳಕೆಗಾಗಿ ‘ಸುಂದರ್ಸ್ ಹೋಮ್್ಸ’ ಎಂಬ ಮೊಬೈಲ್ ಆಪ್ ಅನ್ನು ಸುಂದರ್ ಮತ್ತು ಕೃತಿ ಸಿದ್ಧಪಡಿಸಿದ್ದಾರೆ. ಈ ಆಪ್ ಬಳಸಿ ಮನೆಯ ಫ್ಯಾನ್, ಟಿವಿ, ಧ್ವನಿವರ್ಧಕವನ್ನು ನಿರ್ದಿಷ್ಟ ವ್ಯಾಪ್ತಿ ಮೀರಿ ಇಚ್ಛೆಗೆ ತಕ್ಕಂತೆ ಬಳಸಬಹುದಾಗಿದೆ. ಅಲ್ಲದೆ, ಗೂಗಲ್ ಸಹಾಯದಿಂದಲೂ ವಾಯ್್ಸ ಕಂಟ್ರೋಲ್ ಮಾಡಬಹುದಾಗಿದೆ.

ಮೆಚ್ಚುಗೆಯ ಮಾದರಿ

ವಾಯ್್ಸ ಅಸಿಸ್ಟೆಡ್ ಹೋಮ್ ಆಟೋ ಮೆಷನ್ ಯೂಜಿಂಗ್ ಗೂಗಲ್ ಅಸಿಸ್ಟೆಂಟ್ ಸಾಧನ ಕಾಲೇಜಿನ ಪ್ರಾಜೆಕ್ಟ್ ಮೇಳದಲ್ಲಿ ಪ್ರಥಮ ಬಹುಮಾನ ಗಳಿಸಿದೆ. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್​ನಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ‘2030 ಕ್ಕೆ ಸಕಲರಿಗೂ ಸಹಾಯಕ ತಂತ್ರಜ್ಞಾನ’ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಎಎಚ್​ಎಯುಜಿಎ ಸಾಧನವನ್ನು ಪ್ರದರ್ಶಿಸಲಾಗಿತ್ತು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ದೃಷ್ಟಿಹೀನರಾಗಿರುವ ನಮ್ಮ ಅಜ್ಜಿ, ಮನೆಯಲ್ಲಿ ಉಪಕರಣ ಗಳನ್ನು ಬಳಸಲು ಬಹಳ ಕಷ್ಟ ಪಡುತ್ತಿದ್ದರು. ಅದನ್ನು ಗಮನಿಸಿ ಧ್ವನಿ ಮೂಲಕ ಲೈಟ್, ಫ್ಯಾನ್ ಇತರೆ ವಸ್ತುಗಳನ್ನು ನಿಯಂತ್ರಿಸುವ ಸಾಧನವನ್ನು ತಯಾರಿಸಿದೆವು. ದೈಹಿಕ ನ್ಯೂನತೆಗೊಳಗಾದವರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.

| ಸುಂದರ್, ವಿದ್ಯಾರ್ಥಿ

Leave a Reply

Your email address will not be published. Required fields are marked *