ಡೇವಿಸ್ ಕಪ್‌ನಲ್ಲಿ ಇಂದು-ನಾಳೆ ವಿಶ್ವಗುಂಪು-1ರ ಕಾದಾಟ: ಭಾರತ-ಸ್ವೀಡನ್ ಸಮರ

ಸ್ಟಾಕ್‌ಹೋಮ್: ಪ್ರಮುಖ ಆಟಗಾರರ ಗೈರಿನ ನಡುವೆ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯ ಆಡಲು ಸಜ್ಜಾಗಿರುವ ಭಾರತ ತಂಡ, ವಿಶ್ವ ಗುಂಪು-1ರ ಸೆಣಸಾಟದಲ್ಲಿ ಆತಿಥೇಯ ಸ್ವೀಡನ್ ಎದುರು ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಇದುವರೆಗೆ ಉಭಯ ತಂಡಗಳು ಐದು ಬಾರಿ ಪರಸ್ಪರ ಎದುರಾಗಿದ್ದು, ಭಾರತ ಒಮ್ಮೆಯೂ ಗೆದ್ದಿಲ್ಲ. 2005ರ ಬಳಿಕ ಮೊದಲ ಬಾರಿಗೆ ಡೇವಿಸ್ ಕಪ್‌ನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.

ರಾಯಲ್ ಟೆನಿಸ್ ಹಾಲ್ ಒಳಾಂಗಣ ಕ್ರೀಡಾಂಗಣದ ಹಾರ್ಡ್ ಕೋರ್ಟ್‌ನಲ್ಲಿ ಶನಿವಾರ-ಭಾನುವಾರ ಪಂದ್ಯಗಳು ನಡೆಯಲಿದ್ದು, ಆತಿಥೇಯ ಸ್ವೀಡನ್ ಆಟಗಾರರು ಹೆಚ್ಚಿನ ಲಾಭ ಹೊಂದಿದ್ದಾರೆ. ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಹಾಗೂ ಡಬಲ್ಸ್ ಆಟಗಾರ ಯೂಕಿ ಭಾಂಬ್ರಿ ಗೈರಿನಲ್ಲಿ ಯುವ-ಅನುಭವಿ ಆಟಗಾರರ ಭಾರತ ತಂಡ ಸ್ವೀಡನ್ ತಂಡವನ್ನು ಎದುರಿಸಲಿದೆ. ಕಳೆದ ೆಬ್ರವರಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ಎದುರು ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕಿಳಿದು ಯಶಸ್ವಿಯಾಗಿದ್ದ ಎನ್. ಶ್ರೀರಾಮ್ ಬಾಲಾಜಿ ಹಾಗೂ ಅನುಭವಿ ಡಬಲ್ಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಮೊದಲ ದಿನದ ಎರಡೂ ಸಿಂಗಲ್ಸ್ ಪಂದ್ಯ ಆಡಲಿದ್ದು, ಡಬಲ್ಸ್‌ನಲ್ಲಿಯೂ ಇವರಿಬ್ಬರು ಭಾರತದ ಸವಾಲು ಮುನ್ನಡೆಸಲಿದ್ದಾರೆ. ನಿಕಿ ಪೂಣಚ್ಚ ಮತ್ತೋರ್ವ ಮೀಸಲು ಸಿಂಗಲ್ಸ್ ಆಟಗಾರ ಎನಿಸಿದರೆ, ಮಾಜಿ ರಾಷ್ಟ್ರೀಯ ಚಾಂಪಿಯನ್ ಸಿದ್ದಾರ್ಥ್ ವಿಶ್ವಕರ್ಮ, ಆರ್ಯನ್ ಷಾ ತಂಡದಲ್ಲಿರುವ ಇತರ ಆಟಗಾರರು.

ನೂತನ ತರಬೇತುದಾರ ಅಶುತೋಷ್ ಸಿಂಗ್ ಮಾರ್ಗದರ್ಶನದಲ್ಲಿ ಭಾರತ ಆಡಲಿದ್ದು, ಪ್ರಸ್ತುತ ಉತ್ತಮ ಾರ್ಮ್‌ನಲ್ಲಿರುವ ಶ್ರೀರಾಮ್ ಬಾಲಾಜಿ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 238ನೇ ಶ್ರೇಯಾಂಕಿತ ಎಲಿಯಾಸ್ ಯೆಮರ್ ವಿರುದ್ಧ ಸೆಣಸಲಿದ್ದಾರೆ. ಎಲಿಯಾಸ್ ಸ್ವೀಡನ್‌ನ ಅತ್ಯುತ್ತಮ ಸಿಂಗಲ್ಸ್ ಆಟಗಾರ ಎನಿಸಿದ್ದು, ಎಟಿಪಿ ಟೂರ್‌ನಲ್ಲಿ ರಾಮ್‌ಕುಮಾರ್ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ ಸೋಲಿನ ದಾಖಲೆ ಹೊಂದಿದ್ದಾರೆ. 2ನೇ ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ಮತ್ತು ಲಿಯೋ ಬೋರ್ಗ್ ಎದುರಾಗಲಿದ್ದಾರೆ.

ಭಾನುವಾರ ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿದ್ದು, ಮೊದಲ ದಿನದ ಲಿತಾಂಶದ ಮೇಲೆ ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತದ ಯುವ ಆಟಗಾರರು ಅವಕಾಶ ಗಿಟ್ಟಿಸಿಕೊಳ್ಳಬಹುದು. ಸ್ವೀಡನ್‌ನ ಆಂಡ್ರೆ ಗೊರಾನ್ಸನ್ (66ನೇ ಶ್ರೇಯಾಂಕ) ಮತ್ತು ಫಿಲಿಪ್ ಬರ್ಗೆವಿ (125ನೇ ಶ್ರೇಯಾಂಕ) ಡಬಲ್ಸ್ ಆಟಗಾರರಾಗಿದ್ದಾರೆ.
ಪಂದ್ಯ ಆರಂಭ: ಸಂಜೆ 5.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ಗೆದ್ದರೆ?
ವಿಶ್ವ ಗುಂಪು-1ರ ಭಾರತ-ಸ್ವೀಡನ್ ನಡುವಿನ ವಿಜೇತರು ಮುಂದಿನ ವರ್ಷದ ಕ್ವಾಲಿೈಯರ್‌ಗೆ ಅರ್ಹತೆ ಪಡೆಯಲಿದ್ದು, ಸೋತ ತಂಡ ವಿಶ್ವ ಗುಂಪು-1ರ ಪ್ಲೇಆ್ ವಿಭಾಗಕ್ಕೆ ಕುಸಿಯಲಿದೆ.

ಹಿಂದಿನ ಮುಖಾಮುಖಿ
ಯಾವಾಗ ಭಾರತ-ಸ್ವೀಡನ್
1985 1-4
1987 0-5
1996 0-5
2000 0-5
2005 1-3

ಇಂದಿನ ಪಂದ್ಯಗಳು ಸಿಂಗಲ್ಸ್: ಎನ್.ಶ್ರೀರಾಮ್ ಬಾಲಾಜಿ-ಎಲಿಯಾಸ್ ಯೆಮರ್
ರಾಮ್‌ಕುಮಾರ್ ರಾಮ್‌ನಾಥನ್-ಲಿಯೋ ಬೋರ್ಗ್

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…