More

    ವಾಣಿಜ್ಯ ಶಿಕ್ಷಣ ಕುರಿತು 14ರಿಂದ ವಿಚಾರ ಸಂಕಿರಣ

    ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಮೇ 14ರಿಂದ ಮೂರು ದಿನಗಳ ಕಾಲ ‘ವಾಣಿಜ್ಯ ಶಿಕ್ಷಣ – ಗಡಿ ದಾಟಿ ಸಂಪರ್ಕಿಸುವುದು- ಭವಿಷ್ಯ ರೂಪಿಸುವುದು’ ವಿಷಯ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
    ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಬಸವರಾಜ ಸ್ವಾಮಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದರು.
    ಮೇ 14ರ ಬೆಳಗ್ಗೆ 10 ಗಂಟೆಗೆ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್.ಆರ್. ಶಂಕಪಾಲ್  ಅಧ್ಯಕ್ಷತೆ ವಹಿಸುವರು.
    ಬ್ರಿಟನ್‌ನ ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಲೆಬರ್ನ್ ರೋಸ್ ಹಾಗೂ  ಲಾರೆನ್ಸ್ ಫಿಶರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
      ಬಾಷ್ ಇಂಡಿಯಾ ಫೌಂಡೇಷನ್‌ನ ಮಾಜಿ ಮುಖ್ಯಸ್ಥ ಒ.ಪಿ. ಗೋಯಲ್, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಅಧ್ಯಕ್ಷ ಎಂ.ಎಂ. ಮುನ್ಶಿ, ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಪೂರ್ಣಿಮಾ ಚರಂತಿಮಠ್ ಅವರು ಸಂಕಿರಣದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
    ದಾವಣಗೆರೆ ಸುತ್ತಲಿನ ವಿದ್ಯಾರ್ಥಿಗಳಿಗೆ ಈ ಸಂಕಿರಣ ನೆರವಾಗಲಿದೆ. ಇದರಲ್ಲಿ ವೆಬ್ ತಾಣವಾದ ಡಿಡಿಡಿ.ಜಞ್ಠ.ಚ್ಚ.ಜ್ಞಿ ವೆಬ್ ತಾಣ ಇಲ್ಲವೇ ಮೊ : 88004 41841 ಸಂಪರ್ಕಿಸಬಹುದು ಎಂದು ಬಸವರಾಜ ಸ್ವಾಮಿ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಜಿ.ಎಂ. ವಿವಿ ತರಬೇತಿ ಹಾಗೂ ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ, ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ನಿರ್ದೇಶಕ ಶಿವಕುಮಾರ್,  ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪಿ.ಎಸ್. ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts