ರಾಜ್ಯ ಯುವಜನೋತ್ಸವಕ್ಕೆ ಸಕಲ ಸಿದ್ಧತೆ

blank

ದಾವಣಗೆರೆ: ದಾವಣಗೆರೆಯಲ್ಲಿ ಜ.5, 6ರಂದು ಆಯೋಜನೆಯಾಗಿರುವ ರಾಜ್ಯ ಯುವಜನೋತ್ಸವಕ್ಕೆ ಅಗತ್ಯ ಸಿದ್ಧತೆ ನಡೆದಿದೆ. ಬಾಪೂಜಿ  ನಡೆಯಲಿರುವ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜ.5ರಂದು ಬೆಳಗ್ಗೆ 10-30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕ್ರೀಡಾ ಖಾತೆ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 150 ಜನ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಕಲಾ ತಂಡಗಳೊಂದಿಗೆ ಜಾಥಾ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಜಿಲ್ಲೆಯಿಂದ 25ರಿಂದ 30 ಸ್ಪರ್ಧಾಳುಗಳಂತೆ  1200 ಮಂದಿ ಸ್ಪರ್ಧಿಗಳು ಭಾಗವಹಿಸುವರು. ಬಾಪೂಜಿ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ, ನಗರದ ಎಂಟು ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಸ್ಪರ್ಧಾಳುಗಳಿಗೆ ಟಿ ಶರ್ಟ್, ಕ್ಯಾಪ್, ಮೆಟಲ್ ಬ್ಯಾಡ್ಜ್, ಡೈರಿ ಒಳಗೊಂಡ ಕಿಟ್ ಒದಗಿಸಲಾಗುತ್ತಿದೆ.  
ಸ್ಪರ್ಧಾಳುಗಳು ಬಯಸಿದರೆ ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳನ್ನು ತೋರಿಸಿ ಬರುವ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತ್ಯೇಕ ಸ್ಪರ್ಧೆಗಳ ಆಯೋಜನೆ ಸಂಬಂಧ ಆರು ಕಡೆಗಳಲ್ಲಿ ಸಮಾನಾಂತರ ವೇದಿಕೆ ಆಯೋಜಿಸಲಾಗಿದ್ದು, ಅಲ್ಲಿಗೆ ಹೋಗಿಬರಲು ಜನರಿಗೆ ನಗರದಲ್ಲಿ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರಂತರ ವ್ಯವಸ್ಥೆ ಮಾಡಲಾಗಿದೆ.
ಮುಖ್ಯ ವೇದಿಕೆ ಎದುರು 5 ಸಾವಿರ ಆಸನ ಕಲ್ಪಿಸಲಾಗುತ್ತಿದೆ. ಸಾರಿಗೆ, ವಸತಿ, ಸ್ವಾಗತ, ವೇದಿಕೆ, ಆಹಾರ ಹಾಗೂ ಕಲಾ ತಂಡಗಳ ಉಸ್ತುವಾರಿ ಸಮಿತಿಗಳನ್ನು ರಚಿಸಿಕೊಳ್ಳಲಾಗಿದೆ. ಎನ್‌ಸಿಸಿ- ಸ್ಕೌಟ್ಸ್ ಹಾಗೂ ಗೈಡ್ಸ್‌ಗಳು, ಭದ್ರತಾ ಸಿಬ್ಬಂದಿ, ಶಿಕ್ಷಕರು, ನೆಹರು ಯುವ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಪಂ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ 15 ಕಲಾ ತಂಡಗಳನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ. ಜ. 3ರಂದು ಬೆಳಗ್ಗೆ 6-30ಕ್ಕೆ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ವಾಕಥಾನ್ ಆಯೋಜಿಸಲಾಗಿದ್ದು 2 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಶೀಘ್ರವೇ ಸ್ವಾಗತ ಗೀತೆ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ 40 ಮಂದಿಯನ್ನು ಗೌರವಿಸಲಾಗುವುದು. ಸ್ಪರ್ಧೆಗಳ ತೀರ್ಪುಗಾರರಾಗಿ ಬಂಗಳೂರಿನ 28 ಜನ ಕಲಾವಿದರು ಭಾಗಿಯಾಗುವರು ಎಂದು ತಿಳಿಸಿದರು.  
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಡಿಸಿ ಪಿ.ಎನ್. ಲೋಕೇಶ್, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ, ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿ ರೇಣುಕಾ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಬಿ.ಕೆ.ಮಂಜುನಾಥ್, ಶ್ರೀಕಾಂತ್ ಬಗೇರ ಇತರರಿದ್ದರು.

blank

ಸ್ಥಳೀಯ ಆಹಾರಗಳಿಗ ಆದ್ಯತೆ
ಸ್ಪರ್ಧಾಳುಗಳಿಗೆ ಬೆಣ್ಣೆದೋಸೆ, ಮಾಲ್ದಿ ಮೊದಲಾದ ಸ್ಥಳೀಯ ಆಹಾರವನ್ನೇ ನೀಡಲು ತೀರ್ಮಾನಿಸಲಾಗಿದೆ. ಒಂದು ರಾತ್ರಿ ಮಾಂಸದೂಟ ನೀಡಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಆಹಾರ ತಪಾಸಣೆ ಮಾಡಿದ ನಂತರ ವಿತರಿಸಲು ಕ್ರಮ ವಹಿಸಲಾಗಿದೆ. ಮುಖ್ಯ ವೇದಿಕೆ ಸುತ್ತ ಆಹಾರದ ಮಳಿಗೆ ಆಯೋಜಿಸುವ ಆಸಕ್ತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಕದ್ರಿ ಮಣಿಕಂಠ ತಂಡದ ಆಕರ್ಷಣೆ
ಜ.5ರ ಸಂಜೆ 5 ಗಂಟೆಗೆ ಕದ್ರಿ ಮಣಿಕಂಠ ಕಲಾ ತಂಡ ಯುವಜನೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಇದು ಎಲ್ಲ ಯುವಜನರನ್ನು ಸೆಳೆಯುವ ವಿಶ್ವಾಸವಿದೆ. ಈ ಕಾರ್ಯಕ್ರಮದಲ್ಲಿ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಯಾವ ವೇದಿಕೆ? ಯಾವ ಕಾರ್ಯಕ್ರಮ?
ಎಸ್‌ಎಸ್ ಸಾಂಸ್ಕೃತಿಕ ಸಭಾಂಗಣದಲ್ಲಿ ಜಾನಪದ ನೃತ್ಯ, ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಜಾನಪದ ಗೀತೆ, ಎಸ್‌ಎಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಎಂಬಿಎ ಕಾಲೇಜಿನ ಕೊಠಡಿ ಸಂಖ್ಯೆ ಒಂದರಲ್ಲಿ ಕಥೆ ರಚನಾ ಸ್ಪರ್ಧೆ, ಇಲ್ಲಿಯೇ ಚಿತ್ರಕಲಾ ರಚನೆ, ದೃಶ್ಯಕಲಾ ಕಾಲೇಜಿನಲ್ಲಿ ಡಿಕ್ಲೆಮೇಶನ್ (ವಾಕ್ಚಾತುರ್ಯ) ಸ್ಪರ್ಧೆ ನಡೆಯಲಿವೆ. ಇಲ್ಲಿ ವಿಜೇತರಾದವರು ನವದೆಹಲಿಯಲ್ಲಿ ಜ. 11, 12ರಂದು ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಡಿಸಿ ತಿಳಿಸಿದರು.

ರಾಜ್ಯ ಯುವಜನೋತ್ಸವಕ್ಕೆ 2 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಸರ್ಕಾರದಿಂದ 75 ಲಕ್ಷ ರೂ. ಅನುದಾನ ದೊರೆತಿದೆ. ಇನ್ನೂ 50 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೆ ಗ್ರಾಪಂ ಮೀಸಲು ಅನುದಾನವನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸವಾಲಾಗಿದೆ.
ಜಿ.ಎಂ.ಗಂಗಾಧರಸ್ವಾಮಿ
ಜಿಲ್ಲಾಧಿಕಾರಿ.

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…