ದಾವಣಗೆರೆ: ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಮಹಾನಗರ ಪಾಲಿಕೆ ಮತ್ತು ನಮ್ಮ ದಾವಣಗೆರೆ ಫೌಂಡೇಷನ್ ಸಹಯೋಗದಲ್ಲಿ ಪೌರ ಕಾರ್ಮಿಕರೊಂದಿಗೆ ಶನಿವಾರ ನಗರದ 24ನೇ ವಾರ್ಡ್‌ನಲ್ಲಿ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಾಯುವಿಹಾರಕ್ಕೆ ತೆರಳುವ ಕೆಲವರು ಕೈಯಲ್ಲಿ ಕರ್ ಹಿಡಿದು, ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ, ಇನ್ನು ಕೆಲವರು ಬೈಕು-ಕಾರಿನಲ್ಲೂ ಬಂದು ಕಸ ಎಸೆದು ಹೋಗುತ್ತಾರೆ. ಕೆಲವೆಡೆ ವಿದ್ಯುತ್ ಸ್ಥಾವರ ಕಂಬ, ಯುಜಿ ಕೇಬಲ್ ಜಂಕ್ಷನ್ ಪೆಟ್ಟಿಗೆ ಇದ್ದಾಗ್ಯೂ ಕಸ ಎಸೆದು ಹೋಗುತ್ತಾರೆ. ಇದನ್ನು ತಪ್ಪಿಸಲು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ದಾವಣಗೆರೆ ಫೌಂಡೇಷನ್‌ನ ಸಂಚಾಲಕ ಪವನ್ ರೇವಣಕರ್ ಹೇಳಿದರು.
ವರ್ಷದ ಹಿಂದೆಯೇ ಪಾಲಿಕೆ ಸಹಯೋಗದಲ್ಲಿ ಅನೇಕ ಜಾಗಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ, ಜಾಗೃತಿ ಸಂದೇಶದೊಂದಿಗೆ ಪೇಂಟಿಂಗ್‌ಮಾಡಿಸಲಾಗಿತ್ತು.ಪೌರಕಾರ್ಮಿಕರು ಮಳೆ, ಬಿಸಿಲು, ಧೂಳನ್ನೂ ಲೆಕ್ಕಿಸದೇ ನಮ್ಮ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ, ಅವರೊಂದಿಗೆ ಎಲ್ಲರೂ ಸಹಕರಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವರನ್ನು ಹಿಡಿದು ಸ್ಥಳದಲ್ಲೇ ದಂಡ ವಿಧಿಸುವ ಕಾರ್ಯಕ್ಕೆ ಪಾಲಿಕೆ ಚಾಲನೆ ನೀಡಿದೆ ಎಂದರು.
ಪೌರಕಾರ್ಮಿಕ ಕೆಲಸದ ಮತ್ತೂರಮ್ಮ ಮಾತನಾಡಿ ಮಧ್ಯರಾತ್ರಿ 3-4 ಗಂಟೆಗೆ ಜನು ಕಸ ಎಸೆದು ಹೋಗುತ್ತಿದ್ದು, ನಾಯಿಗಳು, ಎಳೆದಾಡುತ್ತಿವೆ. ಕಸದ ರಾಶಿ ಬಳಿ ಕರೆಂಟ್ ಬಾಕ್ಸ್ ಇದೆ. ಅದನ್ನು ಬಾಚುವಾಗ ವಿದ್ಯುತ್ ಸ್ಪರ್ಶವಾಗುತ್ತದಯೇ ಎಂಬ ಭಯ ಕಾಡುತ್ತದೆ. ಸಾರ್ವಜನಿಕರು ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಿಲೇ ವಾಹನದಲ್ಲಿ ಕಸ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಮದನ್‌ಕುಮಾರ್, ದಫೇದಾರ್ ಪರಶುರಾಮ್, ತ್ರಿಮೂರ್ತಿ, ಪೌರ ಕಾರ್ಮಿಕರಾದ, ನಾಗಮ್ಮ, ಸೋಮಮ್ಮ, ನಮ್ಮ ದಾವಣಗೆರೆ ಪೌಂಡೇಷನ್‌ನ ಪದಾಧಿಕಾರಿಗಳಾದ ಸಚಿನ್ ವೆರ್ಣೇಕರ್, ಅರುಣ್ ಕೋಟೆ, ಅರ್ಜುನ್, ವಿಕಾಸ್, ಸೋಮಶೇಖರ್ ಇತರರಿದ್ದರು.
ಕಸ ಎಸೆಯುವ ಜನರಿಗೊಂದು ಜಾಗೃತಿ!
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!
ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…
ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್ ಬರೋದು ಪಕ್ಕಾ! ಇರಲಿ ಎಚ್ಚರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…