ಆಳುವ ವರ್ಗಕ್ಕೆ ವೀರಶೈವರೇ ಅನಿವಾರ್ಯ  ಸಿ.ಜಿ. ಮಠಪತಿ ವಿಶ್ಲೇಷಣೆ

blank

ದಾವಣಗೆರೆ: ರಾಜಪ್ರಭುತ್ವವಿರಲಿ, ಪ್ರಜಾಪ್ರಭುತ್ವವೇ ಇರಲಿ ಸಾಂಖ್ಯಿಕವಾಗಿ ಪ್ರಾಬಲ್ಯವುಳ್ಳ ವೀರಶೈವ ಸಮಾಜದ ಬೆಂಬಲ, ಸಹಕಾರ ಅತ್ಯಗತ್ಯ ಎಂದು ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕ ಸಿ.ಜಿ. ಮಠಪತಿ ವಿಶ್ಲೇಷಣೆ ಮಾಡಿದರು.
ನಗರದ ಸದ್ಯೋಜಾತ ಮಠದಲ್ಲಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 38ನೇ ವರ್ಷದ ಸ್ಮರಣೋತ್ಸವ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 13ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಭಾವೈಕ್ಯ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು.
ವೀರಶೈವ ಎಂಬುದು ಧಾರ್ಮಿಕ ಅಂಶಗಳ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಅಂಶಗಳನ್ನು ಅಳವಡಿಸಿಕೊಂಡು ಸುಸಂಸ್ಕೃತ ಧರ್ಮವಾಗಿದೆ. ಕರ್ನಾಟಕ ರಾಜ್ಯಾಡಳಿತದ ಚಟುವಟಿಕೆಯಲ್ಲಿ ವೀರಶೈವ ಧರ್ಮದ ಸಹಕಾರ ಆಳುವ ವರ್ಗಕ್ಕೆ ಅನಿವಾರ್ಯ ಆಗಿದೆ ಎಂದರು.
ಬಸವಪೂರ್ವ ಕಾಲದಿಂದಲೂ ವೀರಶೈವ ಧರ್ಮ ಅಸ್ತಿತ್ವದಲ್ಲಿದೆ. ವೀರಶೈವ ಧರ್ಮಕ್ಕೆ ರೇಣುಕಾಚಾರ್ಯ ಆರಂಭದ ಕಾಲ. ಬಸವಣ್ಣನ ಕಾಲ ಉಚ್ರಾಯವಾಗಿತ್ತು. ಯಡಿಯೂರು ಸಿದ್ಧಲಿಂಗೇಶ್ವರ  ಕಾಲದಲ್ಲಿ ಈ ಧರ್ಮದ ಪುನರುತ್ಥಾನ ಆಯಿತು ಎಂದು ಹೇಳಿದರು.
ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮ ಪ್ರಾಚೀನ ಎಂಬುದನ್ನು ಸಿಂಧೂ ನದಿ ನಾಗರಿಕತೆಯಲ್ಲಿ ಸಿಕ್ಕ ಸಾಕ್ಷ್ಯಗಳು ಸಾಕ್ಷೀಕರಿಸಿವೆ. ಆರ್ಯ-ದ್ರಾವಿಡರ ಸಂಘರ್ಷದಿಂದಾಗಿ ಈ ಧರ್ಮ ದಕ್ಷಿಣ ಭಾರತದಲ್ಲಿ ಹರಡಿಕೊಂಡಿತು. ಕರ್ನಾಟಕದಲ್ಲಿ ಈ ಧರ್ಮೀಯರ ಸಾಂದ್ರತೆ ಹೆಚ್ಚು. ಪ್ರಮಾಣಾತ್ಮಕ ಹಾಗೂ ಗುಣಾತ್ಮಕ ಕಾರ್ಯದಿಂದ ಎಲ್ಲರ ಗಮನ ಸೆಳೆದಿದೆ ಎಂದು ಹೇಳಿದರು.
ಅಂದಿನ ಕಾಲದಲ್ಲಿ ಶೈವ-ವೀರಶೈವ ಪರಂಪರೆ ನಡುವೆ ಭಿನ್ನತೆ ಇರಲಿಲ್ಲ. ಶೈವ ಪರಂಪರೆಯಲ್ಲಿ ವೀರಶೈವ ಪ್ರತ್ಯೇಕಿಸಲು ಸಾಧ್ಯವಿಲ್ಲ. ಶೈವ ಧರ್ಮದ ಪ್ರಭೇದಗಳು ವೀರಶೈವ ಧರ್ಮದಲ್ಲಿ 12ನೇ ಶತಮಾನದಲ್ಲಿ ಲೀನವಾದವು. ರಾಜಾಶ್ರಯ ತಪ್ಪಿರುವ ವೀರಶೈವ ಧರ್ಮಕ್ಕೆ ಮಠಗಳ ಆಶ್ರಯ ವರದಾನ ಆದವು ಎಂದ ಅವರು, ವೀರಶೈವ ಅರಸು ಮನೆತನಗಳ ಸಮಗ್ರ ಸಂಶೋಧನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ದೇವಗಿರಿ ಯಾದವರು, ಚೋಳರು, ಹೊಯ್ಸಳರು, ಸಿಂಧರು, ವಾರಂಗಲ್ ಕಾಕತೀಯರು, ವಿಜಯನಗರದ ಅರಸರು, ಬೀಳಗಿ ಅರಸರು, ಹದಿನಾಡ ಪ್ರಭುಗಳು, ಉಮ್ಮತ್ತೂರಿನ ಪಾಳೆಗಾರರು, ಚಿತ್ರದುರ್ಗದ ಪಾಳೆಗಾರರು, ಕಿತ್ತೂರು ಅರಸರು ಸೇರಿ ಹಲವು ರಾಜ ಮನೆತನಗಳು ವೀರಶೈವ ಧರ್ಮ ಪೋಷಣೆ ಮಾಡಿದವು.
ಆಂಧ್ರಪ್ರದೇಶ, ಕರ್ನಾಟಕದಲ್ಲಿ 7ನೇ ಶತಮಾನದ ವೇಳೆಗೆ ವೀರಮಾಹೇಶ್ವರ ಪಂಥ ಶುರುವಾಯಿತು. 12ನೇ ಶತಮಾನದಲ್ಲಿ ವೀರಶೈವ ಧರ್ಮದ ಲೋಪಗಳನ್ನು ಸುಧಾರಣೆ ಮಾಡಿದ್ದು ಬಸವಣ್ಣನವರು. ಅಂದು ಅನುಭವ ಮಂಟಪ ನೋಡಲು ಕಾಶ್ಮೀರ, ಅಪಘಾನಿಸ್ತಾನದಿಂದ ಬಂದವರೆಲ್ಲರೂ ವೀರಶೈವರೇ ಎಂದರು.
ಕಲ್ಯಾಣದ ಶರಣರ ವಚನಗಳಲ್ಲಿ ವೀರಶೈವ ಪದ ಉಲ್ಲೇಖ ಸಾಕಷ್ಟು ಬಾರಿ ಆಗಿದೆ. 20 ಸಾವಿರ ವಚನಗಳಲ್ಲಿ 14 ಬಾರಿ ಮಾತ್ರ ಲಿಂಗಾಯತ ಪದ ಬಳಕೆಯಾಗಿದೆ. ಅದೂ ಕೂಡ ಪ್ರತ್ಯೇಕ ಧರ್ಮದ ರೂಪವಾಗಿ ಅಲ್ಲ ಎಂದ ಅವರು, ವೀರಶೈವ-ಲಿಂಗಾಯತ  ಎರಡರ ನಡುವೆ ಧರ್ಮಭೇದ ಮಾಡದೆ ಒಗ್ಗೂಡಿ ಹೋಗಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಮಾತನಾಡಿ ನಮ್ಮ ಮಕ್ಕಳಿಗೆ ನಮ್ಮ ಕಲೆ, ಧರ್ಮ, ಮಠ ಪರಂಪರೆ ತಿಳಿಸುವ ಅನಿವಾರ್ಯತೆ ಇದೆ ಎಂದರು.

ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು.ರಾಮಘಟ್ಟದ ರೇವಣಸಿದ್ಧ ಶಿವಾಚಾರ್ಯ ಶ್ರೀ, ಮುಷ್ಟೂರು ರುದ್ರಮುನಿ ಶಿವಾಚಾರ್ಯ ಶ್ರೀ, ಎಡೆಯೂರಿನ ರೇಣುಕ ಶಿವಾಚಾರ್ಯ ಶ್ರೀ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಸಹಕಾರ ದುರೀಣ  ಎನ್.ಎ.ಮುರುಗೇಶ್, ಉದ್ಯಮಿ ಅಥಣಿ ಪ್ರಶಾಂತ್, ಉಳುವಯ್ಯ,  ಬನ್ನಯ್ಯಶಾಸ್ತ್ರಿ, ನಂದಿಗಾವಿ ಸುರೇಶ್ ಇದ್ದರು.

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…