ಹತ್ತು ತುಂಬಿದ ಹೊತ್ತು ಪುರವಣಿ ಬಿಡುಗಡೆ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ದಶಮಾನೋತ್ಸವ ಅಂಗವಾಗಿ ‘ವಿಜಯವಾಣಿ’ ಹೊರ ತಂದಿರುವ ‘ಹತ್ತು ತುಂಬಿದ ಹೊತ್ತು’ ವಿಶೇಷ ಪುರವಣಿಯನ್ನು ವಿವಿ ಕುಲಪತಿ ಪ್ರೊ.ಎಸ್.ವಿ.ಹಲಸೆ ಗುರುವಾರ ಬಿಡುಗಡೆ ಮಾಡಿದರು.

ವಿವಿಯ ಎಂಬಿಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕುಲಸಚಿವರಾದ ಪ್ರೊ.ಪಿ.ಕಣ್ಣನ್, ಬಸವರಾಜ ಬಣಕಾರ್, ಹಣಕಾಸು ಅಧಿಕಾರಿ ಜೆ.ಕೆ.ರಾಜು, ಮಾಜಿ ಕುಲಸಚಿವ ಪ್ರೊ.ಬಿ.ಬಕ್ಕಪ್ಪ ಹಾಗೂ ನೂರಾರು ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಈ ಸಂದರ್ಭಕ್ಕೆ ಸಾಕ್ಷಿಯಾದರು.

ವಿವಿಯ ಉಗಮ, ಬೆಳವಣಿಗೆ, ಅಭಿವೃದ್ಧಿ ಕಾರ್ಯಗಳು, ವಿವಿಧ ವಿಭಾಗಗಳಲ್ಲಿ ನಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನೆ, ಗ್ರಂಥಾಲಯ, ವಿವಿ ಆವರಣದ ಪರಿಸರ, ದೃಶ್ಯಕಲಾ ಕಾಲೇಜಿನ ವೈಶಿಷ್ಟೃ, ವಿನೂತನ ಕೋರ್ಸ್‌ಗಳು ಸೇರಿ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಪುರವಣಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಹಾಲಿ ಕುಲಪತಿ ಸಂದರ್ಶನದ ಜತೆಗೆ ಹಿಂದಿನ ಕುಲಪತಿಗಳ ಅನುಭವ, ವಿವಿಗಾಗಿ ನಡೆದಿದ್ದ ಹೋರಾಟ, ವಿವಿಯಲ್ಲಿ ಓದಿ ಈಗ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿರುತ್ತಿರುವವರ ಅನಿಸಿಕೆಗಳು, ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದ ವಿವರಗಳೂ ಪುರವಣಿಯಲ್ಲಿ ಅಡಕವಾಗಿವೆ.

ದಶಮಾನೋತ್ಸವದ ಈ ಸಂದರ್ಭದಲ್ಲಿ ವಿವಿಯ ಬಗ್ಗೆ ಸಮಗ್ರ ಮಾಹಿತಿಯುಳ್ಳ ಪುರವಣಿಯನ್ನು ಪ್ರಕಟಿಸಿದ ವಿಜಯವಾಣಿಯ ಬಗ್ಗೆ ಸಮಾರಂಭದಲ್ಲಿ ಶ್ಲಾಘನೆ ವ್ಯಕ್ತವಾಯಿತು.

ವಿಜಯವಾಣಿ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥ ಎಂ.ಬಿ.ನವೀನ್ ಮಾತನಾಡಿದರು. ಆವೃತ್ತಿಯ ಜಾಹೀರಾತು ವಿಭಾಗದ ವ್ಯವಸ್ಥಾಪಕ ಕುಮಾರಸ್ವಾಮಿ, ದಾವಣಗೆರೆಯ ಜಾಹೀರಾತು ಪ್ರತಿನಿಧಿ ಶಶಿಧರ್, ಪ್ರಸಾರಾಂಗ ವಿಭಾಗದ ಸಂತೋಷ್ ಇದ್ದರು.

Leave a Reply

Your email address will not be published. Required fields are marked *