ಸತ್ಯಾತ್ಮತೀರ್ಥ ಶ್ರೀಗಳಿಗೆ ಭವ್ಯ ಸ್ವಾಗತ

ದಾವಣಗೆರೆ: ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ನಗರದಲ್ಲಿ ಗುರುವಾರ ಭವ್ಯ ಸ್ವಾಗತ ಕೋರಲಾಯಿತು.

ಉತ್ತರಾದಿ ಮಠ, ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ, ಶ್ರೀ ಸತ್ಯಪ್ರಮೋದ ತೀರ್ಥರ ಜನ್ಮ ಶತಮಾನೋತ್ಸವ ನಿಮಿತ್ತ ನಡೆದ ಸಮಗ್ರ ವಾಲ್ಮೀಕಿ ರಾಮಾಯಣ ಪ್ರವಚನದ ಮಂಗಲ ಮಹೋತ್ಸವ ಅಂಗವಾಗಿ ಸ್ವಾಮೀಜಿ ನಗರಕ್ಕೆ ಆಗಮಿಸಿದರು.

ಲಾಯರ್ ರಸ್ತೆಯಲ್ಲಿರುವ ಸರ್ವಜ್ಞಾಚಾರ್ಯ ಸೇವಾ ಸಂಘದಿಂದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದ ವರೆಗೆ ಶೋಭಾಯಾತ್ರೆ ನಡೆಯಿತು.

ಸ್ವಾಮೀಜಿ ಅವರನ್ನು ಆನೆಯ ಮೇಲೆ ಕೂಡಿಸಿ ಮೆರವಣಿಗೆ ಮಾಡಲಾಯಿತು. ವಾದ್ಯ ಮೇಳ, ಭಜನಾ ತಂಡಗಳು ಪಾಲ್ಗೊಂಡಿದ್ದವು. ಭೀಮ ಮತ್ತು ಆಂಜನೇಯ ವೇಷಧಾರಿ ಬಾಲಕರು ಗಮನ ಸೆಳೆದರು.

ವೆಂಕಟಗಿರೀಶಾಚಾರ್, ಸುತೀರ್ಥ ಕಟ್ಟಿ, ಪಾಂಡುರಂಗಾಚಾರ್, ಗೋಪಾಲಾಚಾರ್, ಸುಬ್ಬಣ್ಣಾಚಾರ್, ಶಾಂತೇಶ್ ಗುತ್ತಲ್, ವೆಂಕಟೇಶ ನವರತ್ನ, ಶ್ಯಾಮ್, ನರಹರಿ, ನಾಗರಾಜ್, ಎಂ.ಜಿ. ಶ್ರೀಕಾಂತ್, ಮಾಧವ್ ಪದಕಿ, ಸತೀಶ್ ಬಂಡಿವಾಡ್ ಪಾಲ್ಗೊಂಡಿದ್ದರು.

ನಂತರ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.