ದಾವಣಗೆರೆ: ಏಕಮುಖ ರಸ್ತೆಯಲ್ಲಿ ಸಂಚರಿಸುವ, ಸಿಗ್ನಲ್ ಜಂಪ್ ಮಾಡುವ ಹಾಗೂ ಪಾರ್ಕಿಂಗ್ ಇಲ್ಲದ ಜಾಗದಲ್ಲಿ ವಾಹನ ನಿಲುಗಡೆ ಮಾಡುವ ಸವಾರರಿಗೆ ದಂಡದ ಜತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಘೋಷಿತ ವ್ಯಾಪಾರ ಪ್ರದೇಶ ಹಾಗೂ ನಿರ್ಬಂಧಿತ ವ್ಯಾಪಾರ ಪ್ರದೇಶ ಮತ್ತು ವಾಹನ ಸಂಚಾರ ನಿಯಮಗಳ ಪಾಲನೆ ಕುರಿತು ಸೋಮವಾರ ಎಸ್ಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಡೀಸೆಲ್ ಹಾಗೂ ಇತರೆ ಮಾದರಿಯ ವಾಹನಗಳ ಎಫ್.ಸಿ ಮುಗಿದರೂ ವಾಹನಗಳು ವಿಲೇವಾರಿಗೆ ಬರುತ್ತಿಲ್ಲ ಏಕೆ? ಪಾರ್ಕಿಂಗ್‌ನಲ್ಲಿ ನಿಲ್ಲದೇ ಇರುವ ಕನಿಷ್ಠ 100 ವಾಹನಗಳನ್ನಾದರೂ ತಡೆದು ದಂಡ ವಿಧಿಸಿ, ಗಾಡಿಗಳನ್ನು ಜಪ್ತಿ ಮಾಡಿ ಎಂದು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆಯಲ್ಲಿ ದನಕರುಗಳು ಓಡಾಡುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ. ನಗರದಲ್ಲಿ ಫುಟ್‌ಪಾತ್ ಮೇಲೂ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ನಗರದೊಳಗೆ ಟ್ರಾೃಕ್ಟರ್‌ಗಳು ಸಂಚರಿಸಿದಲ್ಲಿ ಕೂಡಲೇ ಪ್ರಕರಣ ದಾಖಲಿಸಿ. ಲಾರಿಗಳು ನಗರದ ಒಳಗಡೆ ಪ್ರವೇಶಿಸಲು ಸಮಯ ನಿಗದಿಗೊಳಿಸಬೇಕು. ಚಿಗಟೇರಿ ಆಸ್ಪತ್ರೆಯ ಸುತ್ತಮುತ್ತ, ಹೈಸ್ಕೂಲ್ ಮೈದಾನದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಎಂ.ಸ್ಯಾಂಡ್, ಮರಳು, ಸಿಮೆಂಟ್, ಇಟ್ಟಿಗೆ ಸಾಗಣೆಯ ಭಾರಿ ವಾಹನ, ಲಘು ವಾಹನ, ಟ್ಯಾಂಕರ್‌ಗಳು ಮೇಲೊದಿಕೆ ಹಾಕಿಕೊಳ್ಳದೆ ವಾಹನಗಳನ್ನು ಚಲಾಯಿಸುತ್ತಿದ್ದು, ವಾಹನಗಳ ಹಿಂಭಾಗದ ದ್ವಿಚಕ್ರ ವಾಹನ ಚಾಲಕರ ಕಣ್ಣಿಗೆ ಧೂಳು, ಮಣ್ಣು, ಕಲ್ಲಿನ ಕಣಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ಪೊಲೀಸರು ಇಂತಹ ವಾಹನಗಳ ಮೇಲೆ ದಂಡ ವಿಧಿಸಬೇಕು. ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಆಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕರ್ಕಶ ಹಾರ್ನ್ ಅಳವಡಿಸಿ ಚಾಲನೆ ಮಾಡುತ್ತ ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತಿರುವ ಲಘು ಹಾಗೂ ಭಾರೀ ವಾಹನಗಳ ಚಾಲಕರ ವಿರುದ್ಧ ದಂಡ ವಿಧಿಸಬೇಕು ಎಂದೂ ಸೂಚಿಸಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಚಾಮರಾಜಪೇಟೆ, ಮಂಡಿಪೇಟೆ, ಚೌಕಿಪೇಟೆ ಸುತ್ತಮುತ್ತಲಲ್ಲಿ ಪಾರ್ಕಿಂಗ್ ಸಮಸ್ಯೆಯಾಗಿದೆ. ಹದಡಿ ರಸ್ತೆಯಲ್ಲಿ ಜಕಾತಿ ಇಲ್ಲದ್ದರಿಂದ ತರಕಾರಿ , ಹಣ್ಣು ಇತರ ಸಣ್ಣ ಅಂಗಡಿಗಳು ಹೆಚ್ಚಿವೆ. ಮಂಡಿಪೇಟೆ ಸುತ್ತಮುತ್ತ ತುಂಬಾ ಅಂಗಡಿಗಳು ಆಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದರು.
ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ, ಪೊಲೀಸರು ದಂಡ ವಿಧಿಸಿ, ಸಿ.ಸಿ.ಟಿವಿ ಕ್ಯಾಮರಾಗಳ ಮೂಲಕ ದಂಡದ ನೋಟಿಸ್ ಕೂಡ ವಾಹನ ಮಾಲೀಕರಿಗೆ ರವಾನೆಯಾಗುತ್ತಿದೆ. ಬಸ್ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಟ್ಯಾಕ್ಸಿಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ಓಡಾಟಕ್ಕೆ ಕಿರಿಕಿರಿಯಾಗಲಿದೆ. ಹೆಚ್ಚು ಜನರನ್ನು ಕರೆದೊಯ್ಯುವ ಆಟೋಗಳ ಮೇಲೆ ದಂಡ ವಿಧಿಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ಪಾಲಿಕೆ ಮೇಯರ್ ಕೆ. ಚಮನ್‌ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ, ಎಎಸ್ಪಿ ವಿಜಯಕುಮಾರ ಎಂ. ಸಂತೋಷ್, ಮಂಜುನಾಥ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್, ಆರ್‌ಟಿಒ ಅಧಿಕಾರಿ ಪ್ರಮುತೇಶ್, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರಿದ್ದರು.
ಸಂಚಾರ ನಿಯಮ ಮೀರಿದ್ರೆ ಕಠಿಣ ಕಾನೂನುಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count
Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…
ಕ್ಯಾರೆಟ್ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್ ವಿಧಾನ | Recipe
ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…
ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…