ನೆರೆ ಜನ-ದಾನಿಗಳ ಸಂಪರ್ಕ ಸೇತುವೆ

ದಾವಣಗೆರೆ: ನೆರೆ ಸಂತ್ರಸ್ತರ ಸಂಕಷ್ಟಕ್ಕೆ ವಿವಿಧ ಸಂಘಟನೆಗಳು ನಿತ್ಯ ಸ್ಪಂದಿಸುತ್ತಿದ್ದು, ಬುಧವಾರವೂ ವಿವಿಧ ಸಂಘಟನೆ ಕಾರ್ಯಕರ್ತರ, ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರಿಂದ ಜಿಲ್ಲಾದ್ಯಂತ ದೇಣಿಗೆ, ಆಹಾರ ಸಾಮಾಗ್ರಿ ಸಂಗ್ರಹಿಸಿದರು.

ಸಂಕಷ್ಟದಲ್ಲಿರುವ ನೆರೆ ಜನರು ಮತ್ತು ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಮನಸ್ಸುಗಳ ಮಧ್ಯೆ ಸೇತುವೆ ಆಗಿ ಕಾರ್ಯ ನಿರ್ವಹಿಸುವುದು ನಮ್ಮ ಕೆಲಸ. ನೀವು ನೀಡಿ ಆಹಾರ, ಬಟ್ಟೆ, ಹಣವನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ.

ಸಂಕಷ್ಟದಲ್ಲಿರುವ ಜನರಿಗೆ ಪ್ರತಿ ವ್ಯಕ್ತಿ ಸ್ಪಂದಿಸಿ ಎಂದು ಘೋಷಣೆ ಕೂಗುತ್ತ ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನೆರವು ಸಂಗ್ರಹಿಸಿದರು.