ಸಂಚಾರ ಮಾರ್ಗ ಬದಲಾವಣೆ

ದಾವಣಗೆರೆ: ಮೆರವಣಿಗೆ ನಿಮಿತ್ತ ಸೆ.21ರಂದು ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಚಿತ್ರದುರ್ಗದಿಂದ ಬರುವ ವಾಹನಗಳು ಬಾಡಾ ಕ್ರಾಸ್ ಮೂಲಕ ಪಿಬಿ ರಸ್ತೆಯ ಅಗ್ನಿಶಾಮಕ ಠಾಣೆ ಪಕ್ಕದ ರಸ್ತೆ ಪಕ್ಕದ ಖಾಲಿ ಜಾಗ ಮತ್ತು ಸಾರಿಗೆ ಬಸ್‌ಗಳು ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ಪ್ರಯಾಣಿಕರನ್ನು ಹತ್ತಿಸಿಕೊಂಡು ಅದೇ ಮಾರ್ಗವಾಗಿ ವಾಪಸ್ ಹೋಗುವುದು.

ಚನ್ನಗಿರಿ ಕಡೆಯಿಂದ ಬರುವವರು ಹದಡಿ ರಸ್ತೆ, ಜಿಲ್ಲಾ ಕ್ರೀಡಾಂಗಣ ಪಕ್ಕದ ಯುಬಿಡಿಟಿ ಕಾಲೇಜು ಮುಂಭಾಗದ ರಸ್ತೆ ಪಕ್ಕದಲ್ಲಿ ನಿಲುಗಡೆ ಮಾಡಿ, ಅದೇ ಮಾರ್ಗದಲ್ಲಿ ಮರಳುವುದು.

ಜಗಳೂರು ಭಾಗದಿಂದ ಬರುವವರು ಆರ್‌ಎಂ ರಸ್ತೆ ಮೂಲಕ ಗಣೇಶ ಹೋಟೆಲ್, ಈರುಳ್ಳಿ ಮಾರುಕಟ್ಟೆ ರಸ್ತೆ ಮೂಲಕ ಬಂದು ಪಿಬಿ ರಸ್ತೆಯಲ್ಲಿ ತಿರುವು ಪಡೆಯುವುದು ಅಥವಾ ಎಪಿಎಂಸಿ ಮಾರುಕಟ್ಟೆಯ ಮೇಲ್ಸೇತುವೆ ಮೂಲಕ ಸಾರಿಗೆ ಬಸ್ ನಿಲ್ದಾಣಕ್ಕೆ ಬಂದು ನಂತರ ಪ್ರಯಾಣಿಕರನ್ನು ಹತ್ತಿಸಿಕೊಂಡು ಈರುಳ್ಳಿ ಮಾರುಕಟ್ಟೆ ರಸ್ತೆ ಮಾರ್ಗವಾಗಿ ವಾಪಸಾಗುವುದು.

ಶಾಮನೂರು ಕಡೆಯಿಂದ ಬರುವವರು ಬಾಪೂಜಿ ಬ್ಯಾಂಕ್ ಸಮುದಾಯ ಭವನ ಶಾಮನೂರು ರಸ್ತೆ, ಕುಂದುವಾಡ ಕೆರೆಗೆ ಹೋಗುವ ಸರ್ಕಲ್, ಡಿಸಿ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಳೇ ಪಿಬಿ ರಸ್ತೆ ಮೂಲಕ ಸಂಚರಿಸುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *