ದಾವಣಗೆರೆ: ವಿದ್ಯಾರ್ಥಿಗಳಿಗೆ ಅಂಕ ಗಳಿಕೆಗಿಂತ ತತ್ವ ಬಹುಮುಖ್ಯವಾದುದು ಎಂದು ಹರಪ್ಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಚಾರ್ಯ ಎಂ.ಎಸ್.ದೇವರಾಜ್ ತಿಳಿಸಿದರು.
ನಗರದ ಜಿಎಂಐಟಿ ಡಿಪ್ಲೋಮಾ ಪಾಲಿಟೆಕ್ನಿಕ್ನ ಮೆಕ್ಯಾನಿಕಲ್ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಮೌಲ್ಯ, ಮೂಲಜ್ಞಾನ ಕಲಿಕಾ ಮನೋಭಾವನೆ ವೃದ್ಧಿಸಿಕೊಳ್ಳಬೇಕು. ನಾವು ಎಂದಿಗೂ ತತ್ವ ಮರೆಯಬಾರದು ಎಂದರು.
ಪ್ರಾಚಾರ್ಯ ಡಾ.ಪಿ.ಪ್ರಕಾಶ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ನೀವು, ಪ್ರಸ್ತುತ ತಂತ್ರಜ್ಞಾನದಲ್ಲಿನ ಬದಲಾವಣೆ ಸೂಕ್ಷ್ಮವಾಗಿ ಗಮನಿಸಬೇಕು. ಸಂವಹನ ಚಾತುರ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನಿಡಿದರು.
ಸಹ ಪ್ರಾಚಾರ್ಯ ಡಾ.ಶ್ರೀಧರ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಕೌಶಲ್ಯ, ಸಂಶೋಧನಾ ಪ್ರಜ್ಞೆ ಅಭಿವೃದ್ಧಿ ರೂಢಿಸಿಕೊಂಡರೆ ಮಾತ್ರ ಇಂದಿನ ಸವಾಲು ಎದುರಿಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆ ಸಂಯೋಜಕ ಸಿ.ಮಂಜುನಾಥ್ ವರದಿ ಮಂಡಿಸಿದರು. ವಿದ್ಯಾರ್ಥಿ ಚೇತನ್ ಪ್ರಾರ್ಥಿಸಿದರು. ಖಾಸಿಫ್ ಹುಸೆನ್ ಸ್ವಾಗತಿಸಿದರು. ಪುರುಷೋತ್ತಮನ್ ಸಾಯಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ನಿಖಿಲ್ ವಂದಿಸಿದರು. ಕಾರ್ಯದರ್ಶಿ ಕೆ.ಕಾರ್ತಿಕ್ ಇತರರಿದ್ದರು.