ಜಿಲ್ಲೆಯಲ್ಲಿ ಶ್ರೀರಾಮ ನವಮಿ: ರಾಮನಾಮ ಜಪಿಸಿದ ಭಕ್ತರು

ದಾವಣಗೆರೆ: ಶ್ರೀರಾಮ ನವಮಿ ಅಂಗವಾಗಿ ಶನಿವಾರ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ನಗರದ ಪಿಜೆ ಬಡಾವಣೆಯ ರಾಮ ಮಂದಿರದಲ್ಲಿ ಶ್ರೀರಾಮನ ತೊಟ್ಟಿಲೋತ್ಸವ, ವಿಶೇಷ ಪೂಜೆ ಸಲ್ಲಿಸಲಾಯಿತು. ಹಳೇ ನಿಲ್ದಾಣದ ಎದುರಿಗೆ ಗೆಳೆಯರ ಬಳಗದಿಂದ ಸಾರ್ವಜನಿಕರಿಗೆ ಕೊಸಂಬರಿ ವಿತರಿಸಲಾಯಿತು.

ಪಿಬಿ ರಸ್ತೆಯ ಪಂಚಲಿಂಗೇಶ್ವರ ದೇಗುಲ, ಸರಸ್ವತಿ ನಗರದ ಪಂಚಮುಖಿ ಆಂಜನೇಯ ದೇಗುಲದಲ್ಲಿ ಆಂಜನೇಯ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.

ತಾಲೂಕಿನ ಕೊಡಗನೂರಿನಲ್ಲಿ ಶನಿವಾರ ಬೆಳಗ್ಗೆ ಆಂಜನೇಯ ಸ್ವಾಮಿ ರಥೋತ್ಸವ ನೆರವೇರಿತು. ಸಂಜೆ ಓಕಳಿ ಕಾರ್ಯಕ್ರಮ ಜರುಗಿತು. ನರಗನಹಳ್ಳಿಯಲ್ಲಿ ಚಿಂರಜೀವಿ ವೀರಾಂಜನೇಯ ರಥೋತ್ಸವ ಜರುಗಿತು. ಹಳೇಬಾತಿಯ ಆಂಜನೇಯ ರಥೋತ್ಸವ ನಡೆಯಿತು.

Leave a Reply

Your email address will not be published. Required fields are marked *