ದೇವನಗರಿ ದೇಗುಲಗಳು ಸಿಂಗಾರ

ದಾವಣಗೆರೆ: ಜಿಲ್ಲೆಯ ವಿವಿಧ ದೇವತಾ ದೇಗುಲಗಳಲ್ಲಿ ಶರನ್ನವರಾತ್ರಿ ವಿಶೇಷ ಪೂಜೆ, ಅಲಂಕಾರ, ಪಾರಾಯಣ, ಪಲ್ಲಕ್ಕಿ ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದೇಗುಲಗಳು ತಳಿರು ತೋರಣ, ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿವೆ.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸೆ. 29ರಿಂದ ಅ. 9ರ ವರೆಗೆ ಪ್ರತಿದಿನ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಉದಯ ರವಿ ಪಾರಾಯಣ, ಪುರಾಣ ಪ್ರವಚನ, ಮಹಾಮಂಗಳಾರತಿ ಜರುಗಲಿವೆ. 29ರಂದು ಶ್ರೀ ವ್ನಿೇಶ್ವರ ಘಟಸ್ಥಾಪನೆ, ಶ್ರೀದೇವಿಗೆ ಗರುಡಾಲಂಕಾರ, ಕಾಲಭೈರವ ಪೂಜೆ ನೆರವೇರಲಿದೆ.

30ರಂದು ಗಜವಾಹನ ಅಲಂಕಾರ, ಅ.1ರಂದು ವೀಣಾವಾದಕ, 2-ಸಂತಾನಲಕ್ಷಿ ್ಮೀ, 3-ಹಂಸವಾಹನ, 4-ವೃಷಭ ವಾಹನ, 5-ಮಯೂರಿ ನವಿಲು ವಾಹನ, 6-ದುರ್ಗಾಷ್ಟಮಿ (ಮೋಹಿನಿ), 7-ಆಯುಧಪೂಜೆ, ರಾಜರಾಜೇಶ್ವರಿ, ಕುಂಬಾಭಿಷೇಕ, 8-ಗಜಲಕ್ಷಿ ್ಮೀ ವಿಜಯ ದಶಮಿ, ಬನ್ನಿ ಮುಡಿಯುವುದು, 9ರಂದು ಲಕ್ಷ್ಮೀ ಅಲಂಕಾರ, ಸಾಮೂಹಿಕ ವಿವಾಹ, ಕಳಸ ಪೂಜೆ ನೆರವೇರಲಿವೆ.

ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಗಣಪತಿ, ಶಾರದಾಂಬಾ, ಚಂದ್ರಮೌಳೀಶ್ವರ, ಶಂಕರಾಚಾರ್ಯರ ದೇವಾಲಯದಲ್ಲಿ ಅಮ್ಮನವರಿಗೆ ರುದ್ರಾಭಿಷೇಕ, ಚಕ್ರಪೂಜೆ, ಸಹಸ್ರನಾಮಾರ್ಚನೆ, ಸ್ತ್ರೋತ್ರ ಪಠಣ, ಉಪನ್ಯಾಸ, ಸಪ್ತಪತಿ ಪಾರಾಯಣ ಜರುಗಲಿದೆ.

ಅಮ್ಮನವಿಗೆ ಶನಿವಾರ ಜಗತ್ಪ್ರಸೂತಿ ಅಲಂಕಾರ, 29, 30ರಂದು ಹಂಸವಾಹನ, ಅ.1ರಂದು ವೃಷಭವಾಹನ, 2-ಮಯೂರ ವಾಹನ, 3-ಗರುಡವಾಹನ, 4-ಮೋಹಿನಿ, 5-ವೀಣಾ ಶಾರದಾ, 6-ರಾಜರಾಜೇಶ್ವರಿ, 7-ಸಿಂಹವಾಹನ (ಚಾಮುಂಡಿ), 8ರಂದು ಗಜಲಕ್ಷ್ಮೀ ಅಲಂಕಾರ ಮಾಡಲಾಗುವುದು.

ದಾವಲ್ ಪೇಟೆಯ ಶ್ರೀ ಚೌಡೇಶ್ವರಿ ದೇವಿ ದಸರಾ ಮಹೋತ್ಸವ ಪ್ರಯುಕ್ತ ಸೆ.29ರಿಂದ ಅ.8ರ ವರೆಗೆ 10 ದಿನ ವಿಶೇಷ ಪೂಜೆ, ಅಲಂಕಾರ ನೆರವೇರಲಿವೆ.

29ರ ಬೆಳಗ್ಗೆ 10.30ರಿಂದ ಘಟಸ್ಥಾಪನೆ, ಅರಿಶಿನ ಕುಂಕುಮ ಅಲಂಕಾರ, 30-ಸಂತಾನ ಲಕ್ಷಿ ್ಮೀ, ಅ.1-ಮಹಾಗೌರಿ, 2-ಶಾಖಾಂಬರಿ, 3-ಪುಷ್ಪ, 4-ಬಳೆ, 5-ಸರಸ್ವತಿ, 6-ಮಹಿಷಾಸುರ ಮರ್ದಿನಿ, 7-ರಾಜರಾಜೇಶ್ವರಿ, 8ರಂದು ಲಕ್ಷಿ ್ಮೀ ಅಲಂಕಾರ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ.

ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಪರಿವಾರ ದೇವತೆಗಳ ಸಮೇತ ಅಮ್ಮನವರಿಗೆ ಪ್ರತಿದಿನ ಫಲ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಉತ್ಸವ, ಕುಂಕುಮಾರ್ಚಾನೆ, ಅಷ್ಟಾವಧಾನ ಏರ್ಪಡಿಸಲಾಗಿದೆ. ಅ.3ರಂದು ಶ್ರೀನಿವಾಸ ಕಲ್ಯಾಣೋತ್ಸವ, 4ರಂದು ವಾಸವಿ ಮಹಿಳಾ ಸಂಘ, ವಾಸವಿ ಯುವತಿಯರ ಸಂಘದಿಂದ ಅಕ್ಕಿರಾಶಿ ಪೂಜೆ, ಲಲಿತ ಸಹಸ್ರ ನಾಮಾವಳಿಯಿಂದ ಕುಂಕುಮಾರ್ಚನೆ ನೆರವೇರಲಿವೆ.

ಕಾಳಿಕಾ ದೇವಿ ದೇಗುಲದಲ್ಲಿ 10 ದಿನವೂ ಪಂಚಾಮೃತಭಿಷೇಕ, ದುರ್ಗಾಹೋಮ, ಭಜನೆ, ಲಲಿತಾ ಸಹಸ್ರನಾಮ, ಶ್ರೀದೇವಿ ಪಾರಾಯಣ ಏರ್ಪಡಿಸಲಾಗಿದೆ. ಅ.8ರಂದು ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಾಲಯ ಅಮವಾಸ್ಯೆ ನಿಮಿತ್ತ ಶನಿವಾರ ಪುಷ್ಪಾಲಂಕಾರ ಮಾಡಲಾಗಿತ್ತು.

ಡಿಸಿಎಂ ಟೌನ್‌ಶಿಪ್‌ನ ಶ್ರೀ ವಾಸವಿ ಅಮ್ಮನವ ದೇವಸ್ಥಾನದಲ್ಲಿ 10ದಿನ ವಿಶೇಷ ಪೂಜಾಲಂಕಾರ, ದುರ್ಗಾ ಸಪ್ತಸತಿ ಪಾರಾಯಣ ಆಯೋಜಿಸಲಾಗಿದೆ.

ವಸಂತ ಚಿತ್ರಮಂದಿರ ರಸ್ತೆಯ ಶ್ರೀ ಉತ್ಸವಾಂಬಾ, ಚೌಡೇಶ್ವರಿ, ಆದಿಶಕ್ತಿ, ಗಣೇಶ, ಮಹಾಲಕ್ಷ್ಮೀ ದೇವಾಲಯದಲ್ಲಿ 29ರಂದು ಬೆಳಗ್ಗೆ 4ಕ್ಕೆ ರುದ್ರಾಭಿಷೇಕ, 6ಕ್ಕೆ ಘಟಸ್ಥಾಪನೆ ಕಾರ್ಯಕ್ರಮವಿದೆ.

ಚನ್ನಗಿರಿ: ಪಟ್ಟಣದ ಕುಕ್ಕುವಾಡೇಶ್ವರಿ ಅಂಬಾಭವಾನಿ ದೇವಸ್ಥಾನದಲ್ಲಿ 9 ದಿನ ವಿವಿಧ ವಿಶೇಷ ಪೂಜೆ ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ಇರುತ್ತದೆ. 9ರಂದು ಪಟ್ಟಣದ ದೇವತಾಮೂರ್ತಿಗಳನ್ನು ಮುದ್ದೇನಹಳ್ಳಿ ಗ್ರಾಮದ ಮೌದ್ಗುಲ್ ಆಂಜನೇಯ ದೇವಸ್ಥಾನ ಬನ್ನಿ ಮರದ ಬಳಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಹರಪನಹಳ್ಳಿ: ಮೇಗಳಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 9 ದಿನ ದೇವಿ ಪುರಾಣ ಪ್ರವಚನ ಇದೆ. 3ರಂದು ಉಜ್ಜಯಿನಿ ಶ್ರೀಗಳು ಸಾನ್ನಿಧ್ಯದಲ್ಲಿ ಸುಮಂಗಲೆಯರಿಗೆ ಉಡಿ ತುಂಬಲಿವೆ. ಉಚ್ಚಂಗಿದುರ್ಗದಲ್ಲಿ 9 ದಿನ ಶ್ರೀದೇವಿ ಮಹಾತ್ಮೆ ಪುರಾಣ, ಜೋಗಮ್ಮ ತಾಯಿಯರಿಗೆ ಪಟ್ಟಲಗಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಹರಿಹರ: ಮಹಾಜೇನಹಳ್ಳಿ ಗ್ರಾಮದೇವತೆ, ಕಸಬಾ ದೇವತಾ ದೇವಸ್ಥಾನಗಳಲ್ಲಿ 9 ದಿನ ವಿಶೇಷ ಪೂಜೆ, ಅಲಂಕಾರ ನೆರವೇರಲಿದೆ. ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಜರುಗಲಿವೆ.

ಜಗಳೂರು: ಪ್ರವಾಸಿ ಮಂದಿರ ಬಳಿ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಪುಷ್ಪಾಲಂಕಾರ, ಬಾಳೆ, ತುಪ್ಪ, ಸೀರೆ ವಿವಿಧ ಅಲಂಕಾರ ನೆರವೇರಲಿವೆ.

Leave a Reply

Your email address will not be published. Required fields are marked *