ದಾವಣಗೆರೆ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ರಾಜ್ಯ ಸರ್ಕಾರ ಉತ್ತಮ ಅಧ್ಯಾಪಕರನ್ನು ನೇಮಿಸಬೇಕು. ಸಾರ್ವಜನಿಕರು ಕೂಡ ಇದಕ್ಕೆ ಕೈಜೋಡಿಸಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.
ಎಸ್‌ಎಸ್ ಬಡಾವಣೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ನಿರ್ಮಿಸಲಾದ ಡಾ. ಮಹಾಂತಸ್ವಾಮಿ ಪಪೂ ಕಾಲೇಜು ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಸೇರಿ ಎಲ್ಲೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶ ಬರುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ರಿಸಲ್ಟ್ ಇಳಿಮುಖವಾಗಿದೆ. ಸರ್ಕಾರ ಇದಕ್ಕೆ ಕಾರಣಗಳನ್ನು ಹುಡುಕುತ್ತಿದೆ. ಇಷ್ಟು ವರ್ಷ ಕಳೆದರೂ ಪ್ರಗತಿ ಕಂಡಿಲ್ಲ. ಹೀಗಾಗಿ ಉತ್ತಮ ಅಧ್ಯಾಪಕರನ್ನು ನೇಮಿಸಬೇಕು ಎಂದು ಹೇಳಿದರು.
ಒಳಪಂಗಡ ಭೇದ ಮರೆತು ವೀರಶೈವರೆಲ್ಲ ಒಂದೇ ಎಂಬ ಮನೋಭಾವ ಮೂಡಿಸುವುದೇ ವೀರಶೈವ ಸಮಾಜದ ಆಶಯ. ಇದು ಸಾಕಾರವಾಗಲು ಯುವಸಮೂಹ, ಒಳಪಂಗಡಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು ಎಂದೂ ಇದೇ ವೇಳೆ ತಿಳಿಸಿದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಅವರು ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲಿ ಎಂದ ಅವರು, ಸಮಾಜದ ಹಿರಿಯರು ಹಿಂದಿನ ಡಾ.ಮಹಾಂತಸ್ವಾಮಿ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕೆಂಬ ಕಾರಣಕ್ಕೆ ಇತ್ತೀಚೆಗೆ ಎಲ್ಲ ಸಮಾಜಗಳೂ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹ ನೀಡುತ್ತಿವೆ. ಇದು ಒಳ್ಳೆಯ ಲಕ್ಷಣ. ವೀರಶೈವ ಮಹಾಸಭಾದಿಂದ ಪ್ರತಿವರ್ಷ 1 ಕೋಟಿ ರೂ. ಮೊತ್ತದಡಿ ರಾಜ್ಯದ ವಿವಿಧೆಡೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಹರ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಉಮಾಪತಿ ಮಾತನಾಡಿ ಪಂಚಮಸಾಲಿ ಸಮಾಜ ಕಳೆದ 20 ವರ್ಷದಲ್ಲಿ 4 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ. ಸಮಾಜದ ಗಣ್ಯರು ನೀಡಿದ ಸಲಹೆ ಮತ್ತು ಧೈರ್ಯದಿಂದಾಗಿ ಮಹಾಂತ ಸ್ವಾಮೀಜಿ ಅವರ ಹೆಸರಲ್ಲಿ ಪಿಯು ಕಾಲೇಜು ಆರಂಭಿಸಿದ್ದೇವೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದರು.
ಶಿಕ್ಷಣದ ಜತೆಯಲ್ಲೇ ಸಂಸ್ಕಾರ ಪಡೆದು ಸುಶಿಕ್ಷಿತ ನಾಗರಿಕನಾಗಲು ಪ್ರಯತ್ನಿಸಬೇಕು. ತಾಯಂದಿರ ಪ್ರಭಾವದಿಂದಾಗಿ ನಮ್ಮಲ್ಲಿಂದು ಧರ್ಮ-ಸಂಸ್ಕೃತಿ ಇನ್ನೂ ಉಳಿದಿದೆ. ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತಬೇಕು ಎಂದು ಕಿವಿಮಾತು ಹೇಳಿದರು.
ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್ ಮಾತನಾಡಿ ನೂತನ ಕಾಲೇಜು ಆರಂಭ ಆಗಿರುವುದು 44ನೇ ವಾರ್ಡ್‌ನ ಹಿರಿಮೆ ಹೆಚ್ಚಿಸಿದೆ. ಈ ಸಂಸ್ಥೆಯು ರಾಜ್ಯಮಟ್ಟದಲ್ಲಿ ರ‌್ಯಾಂಕ್‌ಗಳನ್ನು ಗಳಿಸಲಿ ಎಂದು ಆಶಿಸಿದರು.
ಡಿಡಿಪಿಯು ಎಸ್.ಜಿ. ಕರಿಸಿದ್ದಪ್ಪ ಮಾತನಾಡಿ ಉಮಾಪತಿ ಅವರು ಜವಳಿ ಕ್ಷೇತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲೂ ಹೆಸರು ಮಾಡಲಿ. ನಗರದಲ್ಲಿ ದೊಡ್ಡ ನಿವೇಶನ ಪಡೆದು ಸುಸಜ್ಜಿತ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಲಿ ಎಂದು ಸಲಹೆ ನೀಡಿದರು.
ಖ್ಯಾತ ವೈದ್ಯ ಡಾ.ಎಸ್.ಎಂ. ಎಲಿ, ಉದ್ಯಮಿ ಎಸ್.ಕೆ. ವೀರಣ್ಣ, ಐ.ಎಸ್.ಪ್ರಸನ್ನಕುಮಾರ್ ಆರಾಧ್ಯ, ಎನ್.ಸಿ.ಅಜ್ಜಯ್ಯ ನಾಡಿಗರ್,
ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಎಸ್.ಕೆ. ಶ್ರೀಧರ್, ಎಂ.ದೊಡ್ಡಪ್ಪ ಇತರರಿದ್ದರು. ಎಸ್ಸೆಸ್ಸೆಲ್ಸಿಯ 120, ಪಿಯುನ 90 ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ಅಂದನೂರು ಆನಂದಕುಮಾರ್ ಸ್ವಾಗತಿಸಿದರು. ಅಂದನೂರು ಮುರುಗೇಶಪ್ಪ ಪ್ರಾಸ್ತಾವಿಕ ಮಾತನಾಡಿದರು.
ಸುಧಾರಿಸಲಿ ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮ ಅಧ್ಯಾಪಕರ ನೇಮಕಕ್ಕೆ ಶಾಮನೂರು ಸಲಹೆ
ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!
ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…
ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..
ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…