ದಾವಣಗೆರೆ: ‘ಎಲ್ಲೋ ಜೋಗಪ್ಪ ನಿನ್ನರಮನೆ’ ನನ್ನ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಫೆ. 21ರಂದು ರಾಜ್ಯದ 50 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಹಯವದನ ಹೇಳಿದರು.
ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಹೀಗೆ ಟಿವಿ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೆ. ಇದೀಗ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದೇನೆ. ತಂದೆ-ಮಗನ ಬಾಂಧವ್ಯದ ಹಾಗೂ ಭಾವನಾತ್ಮಕವಾದ ಈ ಚಿತ್ರವನ್ನು ಕುಟುಂಬದ ಸದಸ್ಯರು ಕೂತು ನೋಡಬಹುದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಗ ದುಡಿಮೆಯಲ್ಲಿ ಯಶಸ್ಸು ಕಾಣಬೇಕೆಂದು ಬಯಸುವ ತಂದೆ, ಸಾಮಾಜಿಕ ಜಾಲತಾಣದಿಂದ ಪ್ರಭಾವಿತನಾದ ಮಗ ಅದರಿಂದ ಏನನ್ನೋ ಮಾಡಬೇಕೆಂದು ಭಾರತ ಯಾತ್ರೆ ಮಾಡುತ್ತಾನೆ. ಬೆಂಗಳೂರಿನಿಂದ ಕಾಶ್ಮೀರವರೆಗೆ ವಿವಿಧ ರಾಜ್ಯಗಳಲ್ಲಿ ಸುತ್ತಾಡುವ ನಾಯಕನಟ ಸುತ್ತಾಡುವ ವೇಳೆ ಹಲವು ವ್ಯಕ್ತಿಗಳು ಹಾಗೂ ಸಂದರ್ಭಗಳನ್ನು ಎದುರಿಸುತ್ತಾನೆ. ಅವರು ಬಯಸಿದ್ದು ಸಿಗುತ್ತದೆಯೇ ಎಂಬುದು ಚಿತ್ರದ ಕಥಾವಸ್ತುವಾಗಿದೆ ಎಂದರು.
ಬೆಂಗಳೂರು, ಬಿಜಾಪುರ, ಬಾಗಲಕೋಟೆ, ಆಗ್ರಾ. ನವದೆಹಲಿ, ಮನಾಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಪವನ್ ಸೀಮಿಕೆರೆ, ಸಿಂಧು ಹಯವಧನ ಚಿತ್ರಕ್ಕೆ ಒಟ್ಟು 2.5 ಕೋಟಿ ರೂ. ಬಂಡವಾಳ ಹಾಕಿದ್ದಾರೆ. ಸಿ. ರವಿಚಂದ್ರನ್ ಸಂಕಲನ, ಶಿವೋಮ್ ಸಂಗೀತ, ಪ್ರಮೋದ್ ಮರವಂತೆ, ರವೀಂದ್ರ ಮುದ್ದಿ ಸಾಹಿತ್ಯ ಒದಗಿಸಿದ್ದಾರೆ. ಹೊಸಮನೆ ಮೂರ್ತಿ ಕಲಾ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.
ಚಿತ್ರದಲ್ಲಿ ಅಂಜನ್ ನಾಗೇಂದ್ರ ಮತ್ತು ವೆನ್ಯಾ ರೈ ನಾಯಕ ನಟ-ನಟಿಯರಾಗಿ, ಸಹ ನಟರಾಗಿ ಸಂಜನಾ ದಾಸ್, ಶರತ್ ಲೋಹಿತಾಶ್ವ, ದಿನೇಶ್ ಮಂಗಳೂರು, ಬಿರಾದಾರ್, ದಾನಪ್ಪ ಉಮೇಶ್ ಕಿನ್ನ್ನಾಳ, ವಿಠ್ಠಲ ಪರೀಟ್, ಸ್ವಾತಿ, ಇಳಾ ವಿಟ್ಲಾ ನಟಿಸಿದ್ದಾರೆ. ನಿನ್ನೆಯಷ್ಟೇ ಟ್ರೇಲರ್ ಬಿಡುಗಡೆಯಾಗಿದೆ ಎಂದು ಹೇಳಿದರು.
ನಟ ಅಂಜನ್ ನಾಗೇಂದ್ರ ಮಾತನಾಡಿ ಕಂಬಳಿ ಹುಳ ನಂತರದಲ್ಲಿ ಇದು ನಾಯಕನಟನಾಗಿ ನನ್ನ ಎರಡನೇ ಸಿನಿಮಾ. ಇದು ಕೇವಲ ಪ್ರಯಾಣದ ಕತೆಯಲ್ಲ. ಭಾವನೆಗಳ ಪ್ರಯಾಣ ಕೂಡ. ಹೋದಡೆ ಪರಿಚಯವಾಗುವ ಜನರು ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಮೊದಲಾರ್ಧದ ಸಿನಿಮಾ ನೋಡಿದಾಗ ಸಾರ್ಥಕತೆ ಬರಲಿದೆ ಎಂದರು.
ನಟಿ ವೆನ್ಯಾ ರೈ ಮಾತನಾಡಿ ಭಾವಪೂರ್ಣ, ಹಾರಾಟ ಬಳಿಕ ಇದು ನನ್ನ ಮೂರನೇ ಸಿನಿಮಾ. ಚಿತ್ರದಲ್ಲಿ ನಾನು ಪಂಡರಾಪುರದ ಟಿಪಿಕಲ್ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು.
ಹಾಸ್ಯನಟ ದಾನಪ್ಪ ಮಾತನಾಡಿ ವಿಭಿನ್ನ ಭಾಷೆ, ವ್ಯಕ್ತಿತ್ವ, ನೆಲ ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ. ಪ್ರಯಾಣದ ಅಂತ್ಯದಲ್ಲಿ ಜನರಿಗೆ ಕನೆಕ್ಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
—
ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ 21ಕ್ಕೆ ಬಿಡುಗಡೆ

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…
ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…
ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes
grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…